ಮೈಸೂರು, ಬೆಂಗಳೂರು ಮಳವಳ್ಳಿ, ಹಾಸನ ಸೇರಿದಂತೆ ರಾಜ್ಯದ ಹಲವೆಡೆ ಎಸಿಬಿ ಅಧಿಕಾರಿಗಳು ಏಕ ಕಾಲಕ್ಕೆ ಶುಕ್ರವಾರ ದಾಳಿ ಮಾಡಿದ್ದಾರೆ.
ಮೈಸೂರಿನ ಅರಣ್ಯ ಇಲಾಖೆಯ ಎಸಿಎಫ್ ಶಿವಶಂಕರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮೈಸೂರಿನ ಅರಣ್ಯ ಭವನದಲ್ಲಿ ಕೆಲಸ ಮಾಡುವ ಎಸಿಎಫ್ ಶಿವಶಂಕರ್ ಗೆ ಅಕ್ರಮ ಆಸ್ತಿ ಇದೆ ಎಂಬ ದೂರಿನ ಅನ್ವಯ ಐದು ಕಡೆಗಳಲ್ಲಿ ಶೋಧ ಕಾರ್ಯ ನಡೆದಿದೆ.
ಮೈಸೂರಿನ ನಜರ್ ಬಾದ್, ಸರಸ್ವತಿಪುರಂ, ಜೆ.ಸಿ.ಲೇಔಟ್,ಮಂಡ್ಯ ಮತ್ತು ಮಳ್ಳವಳ್ಳಿಯಲ್ಲಿ ಏಕ ಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಹಲವು ದಾಖಲಾತಿ ಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾಸನದ ಭೂ ಸೇನಾ ನಿಗಮದ ಎಇಇ ಅಶ್ವಿನಿ ನಿವಾಸದ ಮೇಲೂ ಎಸಿಬಿ ತಂಡ ದಾಳಿ ಮಾಡಿದೆ.
ಅಶ್ವಿನಿಯವರ ಎರಡು ಮನೆಗಳ ಮೇಲೆ ನಡೆದಿರುವ ಈ ದಾಳಿ ಹಾಸನದ ಉದಯನಗರ, ವಿದ್ಯಾನಗರದಲ್ಲಿರುವ ಅಶ್ವಿನಿ ತಂದೆ ನಿವಾಸದ ಮೇಲೂ ದಾಳಿಯಾಗಿದೆ.
ಭೂ ಸೇನಾ ನಿಗಮದ ಎಇಇ ಯಾಗಿರುವ ಅಶ್ವಿನಿ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಎಸಿಬಿ ದಾಳಿ ಮಾಡಿದೆ.
ಎಸಿಬಿ ಡಿವೈಎಸ್ಪಿ ಕೃಷ್ಣಮೂರ್ತಿ ನೇತೃತ್ವದ ತಂಡದಿಂದ ದಾಳಿ ನಡೆದಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು