February 20, 2026

Newsnap Kannada

The World at your finger tips!

crime

ಪ್ರವೀಣ್​​ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ABVP ಪ್ರತಿಭಟನೆ: ಅಸಮರ್ಥ CM ಬೊಮ್ಮಾಯಿ‌-ಘೋಷಣೆ

Spread the love

ಬೆಳ್ಳಾರೆಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್​ ನೆಟ್ಟಾರು ಹತ್ಯೆಯನ್ನು ಖಂಡಿಸಿ(ABVP) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ಪ್ರತಿಭಟನೆಗೆ ಸಿದ್ದವಾಗಿದೆ

ಶನಿವಾರ ಬೆಂಗಳೂರಿನ ಜಯಮಹಲ್ ನಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಿದ ಎಬಿವಿಪಿ, ಬಿಜೆಪಿ ಕಾರ್ಯಕರ್ತರು SDPI, PFI ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಇದನ್ನು ಓದಿ – IT ರಿಟರ್ನ್ ಸಲ್ಲಿಸಲು ನಾಳೆ ಕೊನೆ ದಿನ : ತಪ್ಪಿದರೆ ದಂಡ

ಒಂದು ವೇಳೆ SDPI, PFI ಸಂಘಟನೆಗಳನ್ನು ನಿಷೇಧ ಮಾಡಲು ಆಗದಿದ್ದರೆ ರಾಜೀನಾಮೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ

ಪ್ರತಿಭಟನಾನಿರತ ಕಾರ್ಯಕರ್ತರು “ಅಸಮರ್ಥ ಸಿಎಂ ಬಸವರಾಜ ಬೊಮ್ಮಾಯಿ‌” ಎಂದು ಘೋಷಣೆ ಕೂಗುತ್ತಿದ್ದಾರೆ. ಸಚಿವ ಈಶ್ವರಪ್ಪ ವಿರುದ್ಧವೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಲಾಠಿ ಚಾರ್ಜ್​​​ ಮಾಡಿ ಕಾರ್ಯಕರ್ತರನ್ನು ಓಡಿಸುವ ಸಿದ್ದತೆ ಮಾಡಿದ್ದಾರೆ.

error: Content is protected !!