February 22, 2026

Newsnap Kannada

The World at your finger tips!

udymi m

ವಿವಾಹದ ಭರವಸೆ ನೀಡಿ, ಉದ್ಯಮಿಗೆ 36 ಲಕ್ಷ ರು ವಂಚಿಸಿದ ಯುವತಿ‌‌

Spread the love

ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳು ಉದ್ಯಮಿಯೊಬ್ಬರಿಗೆ 36 ಲಕ್ಷ ರೂ. ವಂಚಿಸಿದ ಘಟನೆ ಬೆಂಗಳೂರಿನ ಹೆಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌.

ಕ್ವಾನ್’ಟೇಕ್ ಕನ್ಸಲ್ಟೆನ್ಸಿ ಕಂಪನಿಯ ಸಿಇಒ ಅನಂತ್ ಮಲ್ಯ ಮೋಸ ಹೋದ ಉದ್ಯಮಿ. ಅನಂತ್ ಮಲ್ಯ 2019ರ ಜೂನ್ ನಲ್ಲಿ ಯುವತಿಯೊಬ್ಬಳ ಪರಿಚಯವಾಗಿದೆ,
‌ ನಂತರ ಇಬ್ಬರ ನಡುವೆ ಪ್ರೇಮ‌ ಅಂಕುರವಾಗಿತ್ತು. ‌ಮದುವೆ ಆಗುತ್ತೇನಿ ಅಂತ ನಂಬಿಸಿದ್ದ ಯುವತಿ ಸೈಟ್ ಖರೀದಿಸಲು ಅನಂತ್ ಮಲ್ಯ ಅವರ ಬಳಿ 36.22 ಲಕ್ಷ ಹಣ ಪಡೆದಿದ್ದಳು.

ಹಣ ಪಡೆದ ನಂತರ ಮಲ್ಯರನ್ನು ಅವೈಡ್ ಮಾಡಲು ಶುರು ಮಾಡಿದ್ದಾಳೆ.‌‌ ಇಬ್ಬರ ನಡುವೆ ಜಗಳ ನಡೆದು ಕೊಟ್ಟ ಹಣವನ್ನು ವಾಪಸ್ಸು ಕೊಡಿ ಎಂದು ಕೇಳಿದ್ದಾರೆ.

36 ಲಕ್ಷ ಹಣದಲ್ಲಿ 6.90 ಲಕ್ಷ ಹಣವನ್ನು ಯುವತಿ ವಾಪಸ್ ಕೊಟ್ಟಿದ್ದಾಳೆ. ಉಳಿದ 29.40 ಲಕ್ಷ ರೂ ಮರಳಿಸದೇ ನಾಪತ್ತೆಯಾಗಿದ್ದಾಳೆ. ಅನಂತ್ ಮಲ್ಯ ಹೆಚ್ ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

error: Content is protected !!