December 29, 2024

Newsnap Kannada

The World at your finger tips!

bumper

ಇಬ್ಬರು ಯುವತಿಯರನ್ನು ವರಿಸಿದ ಯುವಕ – ಈತನ ಪಾಲಿಗೆ ಬಂಪರ್ ಬಹುಮಾನವಂತೆ !

Spread the love

ಈತ ಇಬ್ಬರ ಹೆಂಡಿರ ಮುದ್ದಿನ ಚಂದ್ರ. ಈತನನ್ನು ಇಬ್ಬರು ಹುಡುಗಿಯರು ಲೌವ್ ಮಾಡುತ್ತಾರೆ.
ಕೊನೆಗೆ ಒಂದೇ ಮಂಟಪ , ಇಬ್ಬರು ಹುಡುಗಿಯರು, ಒಬ್ಬನೇ ಹುಡುಗ ಮದುವೆಯಾದ ನೈಜ ಘಟನೆ ಚತ್ತಿಸ್ ಗಢ ನಲ್ಲಿ ನಡೆದಿದೆ.

ಚತ್ತೀಸಗಢದ ಬಸ್ತಾರ್ ಜಿಲ್ಲೆಯ 24 ವರ್ಷದ ಚಂದ್ರ ಎಂಬಾತ ಸುರ ಸುಂದರನೇನೂ ಅಲ್ಲ. ಆದರೂ ಇಬ್ಬರು ಹುಡುಗಿಯರು ಆತನನ್ನು ಇಷ್ಟ ಪಟ್ಟು ಮದುವೆಯಾಗುತ್ತಾರೆ.

ಈ ಚಂದ್ರ ಮೌರ್ಯ ಜಿಲ್ಲೆಯ ತೋಪಾಕಲ್ ಪ್ರದೇಶದಲ್ಲಿ ವಿದ್ಯುತ್ ಕಂಬ ನೆಡುವ ಕೆಲಸಕ್ಕೆ ಹೋದಾಗ 21 ವರ್ಷದ ಸುಂದರಿ ಕಷ್ಯಪ್ ಎಂಬ ಯುವತಿಯ ಪರಿಚಯವಾಗಿ, ಪ್ರೀತಿಗೆ ತಿರುಗಿದೆ.

ನಂತರ ಕಳೆದ ವರ್ಷ ಹಸೀನಾ ಎಂಬ ಯುವತಿ ಯಾರದ್ದೋ ಮದುವೆಗೆ ಬಂದಿದ್ದಾಳೆ. ಆಗ ಚಂದ್ರನ ಪರಿಚಯ ವಾಗಿದೆ. ಆತನ ಫೋನ್ ನಂಬರ್ ಪಡೆದುಕೊಂಡ ಹೋದ ಹಸೀನಾ ಕೂಡ ಚಂದ್ರ ನಲ್ಲಿ ಪ್ರೇಮ ನಿವೇದನೆ ಮಾಡಿ ಕೊಂಡಳು.

ಮೂವರೂ ಲಿವ್ ಇನ್ ರಿಲೇಶನ್ಸ್ !

ಮೊದಲನೇ ಹುಡುಗಿ ಸುಂದರಿಯನ್ನು ಲೌವ್ ಮಾಡುವ ಬಗ್ಗೆ ‌ಚಂದ್ರ ಎರಡನೇ ಹುಡುಗಿ ಹಸೀನಾಳಿಗೆ ಹೇಳುತ್ತಾನೆ. ಆದರೂ ನಾನು ನಿನ್ನನ್ನು ಬಿಟ್ಟು ಬೇರೆಯವರನ್ನು ಪ್ರೀತಿಸುವುದಿಲ್ಲ. ಮದುವೆ ಯಾಗುವುದಿಲ್ಲ ಎಂದು ಹಟ ಹಿಡಿದ ಹಸೀನಾ ಚಂದ್ರನ ಮನೆಗೆ ಬರುತ್ತಾಳೆ.

ಹಸೀನ್ – ಚಂದ್ರು ಲೌವ್ ಸ್ಟೋರಿ ಗೆ ಹಸಿರು ನಿಶಾನೆ ತೋರಿದ ಸುಂದರಿ ಕಷ್ಯಪ್ ಕೂಡ ಚಂದ್ರ ನ‌ ಮನೆಗೆ ಬಂದು ಮೂವರೂ ಲೀವ್ ಇನ್ ರಿಲೇಶನ್ಸ್ ವಾಸಿಸತೊಡಗಿದರು.

ಇಬ್ಬರೊಂದಿಗೂ‌ ಮಾತನಾಡಿ, ಒಪ್ಪಿಸಿ ಇಬ್ಬರನ್ನೂ ಒಂದೇ ಮಂಟಪದಲ್ಲಿ ಜನವರಿ 5 ರಂದು ಮದುವೆ ಯಾಗಿದ್ದಾನೆ. ನಂಗೆ ಇಬ್ಬರನ್ನೂ ಮದುವೆಯಾಗಿದ್ದು ಬಂಪರ್ ಬಹುಮಾನ ಬಂದಂತಾಗಿದೆ ಎನ್ನುತ್ತಾನೆ ಚಂದ್ರ.

ಮೊದಲ ರಾತ್ರಿ ಅನುಭವ ಹೇಗಿತ್ತು? :

ಹಸೀನಾ, ಚಂದ್ರ ನ ಕುಟುಂಬದವರು ಮದುವೆಗೆ ಬಂದಿದ್ದಾರೆ. ಸುಂದರಿ ಕಷ್ಯಪ್ ಕುಟುಂಬ ಮುನಿಸಿಕೊಂಡು ಮದುವೆಗೆ ಬರಲಿಲ್ಲ. ಆದರೂ ಇಬ್ಬರ ಯುವತಿಯರನ್ನು ವರಿಸಿದ ಚಂದ್ರನನ್ನು ನಿಮ್ಮ ಮೊದಲ ರಾತ್ರಿ ಅನುಭವ ಹೇಳಿ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದಾಗ, ನಾಚಿ ನೀರಾದ ಚಂದ್ರ ಮೆತ್ತಗೆ ಜಾಗ ಖಾಲಿ ಮಾಡಿಕೊಂಡು ಹೋಗಿದ್ದಾನೆ.

Copyright © All rights reserved Newsnap | Newsever by AF themes.
error: Content is protected !!