ಬೆಂಗಳೂರು: ಕ್ಷುಲ್ಲಕ ಕಾರಣದಿಂದ ಬಿಎಂಟಿಸಿ (BMTC) ವೋಲ್ವೋ ಬಸ್ ಕಂಡಕ್ಟರ್‌ಗೆ ಪ್ರಯಾಣಿಕನೊಬ್ಬ ಚಾಕು ಇರಿದಿರುವ ಘಟನೆ ನಗರದಲ್ಲಿ ನಡೆದಿದೆ.
ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ವೈದೇಹಿ ಬಸ್ ನಿಲ್ದಾಣದ ಬಳಿ, ಯುವಕನೊಬ್ಬ ವೋಲ್ವೋ ಬಸ್ ಹತ್ತಿದ್ದನು. ಬಸ್‌ನಲ್ಲಿ ಒಳಗೆ ಹೋಗದೇ ಡೋರ್ ಸಮೀಪ ನಿಂತಿರುವಾಗ, ಕಂಡಕ್ಟರ್ ಯೋಗಿಶ್ ಯುವಕನಿಗೆ ಒಳಗಡೆ ಹೋಗುವಂತೆ ಸೂಚಿಸಿದರು. ಇದರಿಂದ ಕೋಪಗೊಂಡ ಯುವಕ, ಕಂಡಕ್ಟರ್ ಹೊಟ್ಟೆ ಭಾಗಕ್ಕೆ ಚಾಕು ಇರಿದನು.
ಬಸ್‌ನಲ್ಲಿ ಇದ್ದ ಇತರ ಪ್ರಯಾಣಿಕರು ಭಯದಿಂದ ಚಿರಾಡಿದಾಗ, ಯುವಕ ಇಳಿದು ಓಡಲು ಯತ್ನಿಸಿದನು. ನಂತರ, ಬಸ್‌ನಲ್ಲಿದ್ದ ಪ್ರಯಾಣಿಕರು 112 ಗೆ ಕರೆ ಮಾಡಿ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದರು. ಪೊಲೀಸ್ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಕಂಡಕ್ಟರ್ ಯೋಗಿಶ್ ಅವರನ್ನು ದಾಖಲಿಸಿದ್ದಾರೆ.ಇದನ್ನು ಓದಿ –ಅಖಂಡ ಭಾರತಕ್ಕಾಗಿ ಮತ್ತೆ ಹುಟ್ಟಿ ಬಾ ಗಾಂಧೀಜಿ…
ಚಾಕು ಇರಿದಿರುವ ಯುವಕನನ್ನು ವಶಕ್ಕೆ ಪಡೆದು, ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಯುತ್ತಿದೆ. ಆರೋಪಿ ಹರಿಸಿಂಹ ಜಾರ್ಖಂಡ್ ಮೂಲದವನು ಎಂದು ತಿಳಿದು ಬಂದಿದೆ.
More Stories
KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
BBMP ಕಚೇರಿಯಲ್ಲಿ ಇಡಿ ದಾಳಿ: 960 ಕೋಟಿ ರೂ. ಅಕ್ರಮ ತನಿಖೆ
ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ: ಈಶ್ವರ್ ಖಂಡ್ರೆ ಸ್ಪಷ್ಟನೆ