January 10, 2025

Newsnap Kannada

The World at your finger tips!

police 1

ಆಸ್ತಿಗಾಗಿ ಅಕ್ಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ತಂಗಿ

Spread the love

ಆಸ್ತಿಗಾಗಿ ಸ್ವಂತ ಅಕ್ಕನನ್ನೇ ಪೆಟ್ರೋಲ್​ ಹಾಕಿ ಸುಟ್ಟ ದಾರುಣ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ವಾಡಿಯಾರಾಮ್ ಗ್ರಾಮದಲ್ಲಿ ನಡೆದಿದೆ.

ವರಲಕ್ಷ್ಮಿ ಮತ್ತು ರಾಜೇಶ್ವರಿ ಎಂಬ ಇಬ್ಬರು ಸಹೋದರಿಯರ ಮಧ್ಯೆ ಆಸ್ತಿ ಹಂಚಿಕೆ ವಿಚಾರವಾಗಿ ನಿತ್ಯ ಜಗಳ ನಡೆಯುತ್ತಿತ್ತು

ವರಲಕ್ಷ್ಮಿ ಸಹೋದರಿ ರಾಜೇಶ್ವರಿ ಮೇಲೆ ಒಂದು ಬಾಟೆಲ್​ನಲ್ಲಿ ಪೆಟ್ರೋಲ್​ ತಂದು ಸುರಿದು ಬೆಂಕಿ ಹಚ್ಚಿದ್ದಾಳೆ.

ಗಂಭೀರವಾಗಿ ಗಾಯಗೊಂಡ ವರಲಕ್ಷ್ಮಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ ಎಂದು ಚೇಗುಂಟಾ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಚ್ಛೇದಿತರಾಗಿರುವ ವರಲಕ್ಷ್ಮಿ ಮತ್ತು ಆಕೆಯ ತಂಗಿ ರಾಜೇಶ್ವರಿ ಕಾಮರೆಡ್ಡಿ ಜಿಲ್ಲೆಯಲ್ಲಿ ತಮ್ಮ ಪೋಷಕರ ಒಡೆತನದ ಐದು ಎಕರೆ ಭೂಮಿಯನ್ನು ಹಂಚಿಕೊಳ್ಳುವ ಬಗ್ಗೆ ಜಗಳವಾಡುತ್ತಿದ್ದರು. ಅದರಂತೆ ಮೊನ್ನೆ ರಾಜೇಶ್ವರಿ ವರಲಕ್ಷ್ಮಿ ಮನೆಗೆ ಬಂದಿದ್ದಳು. ಈ ವೇಳೆ ಆಸ್ತಿ ಹಂಚಿಕೆ ವಿಚಾರವಾಗಿ ಸಹೋದರಿಯರ ನಡುವೆ ಜಗಳ ನಡೆದಿದೆ. ಆಗ ರಾಜೇಶ್ವರಿ ತಂದಿದ್ದ ಪೆಟ್ರೋಲ್ ವರಲಕ್ಷ್ಮಿ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ.

ಬೆಂಕಿ ಜೋರಾಗಿ ಹತ್ತಿಕೊಳ್ಳುತ್ತಿದ್ದಂತೆ ವರಲಕ್ಷ್ಮೀ ಸಹೋದರಿ ರಾಜೇಶ್ವರಿಯನ್ನ ತಬ್ಬಿಕೊಂಡಿದ್ದಾಳೆ ಇದನ್ನು ಗಮನಿಸಿದ ಸ್ಥಳೀಯರು ಓಡಿ ಬಂದು ಇಬ್ಬರನ್ನೂ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ.  

ಆದರೆ ವರಲಕ್ಷ್ಮಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ರಾಜೇಶ್ವರಿ ಸುಟ್ಟಗಾಯಗಳಿಂದ ಬಳಲುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!