February 20, 2026

Newsnap Kannada

The World at your finger tips!

nagarjuna

ಮೈಸೂರಿನಲ್ಲಿ ತಂದೆ ಸೇರಿ ಆತನ ಜೊತೆಯಲ್ಲಿದ್ದ ಮಹಿಳೆಯನ್ನು ಕೊಲೆ ಮಾಡಿದ ಮಗ

Spread the love

ತಂದೆ ಸೇರಿ ಆತನ ಜೊತೆಯಲ್ಲಿದ್ದ ಮಹಿಳೆಯನ್ನು ಮಗನೇ ಕೊಲೆ ಮಾಡಿದ ಘಟನೆ ಶುಕ್ರವಾರ ಬೆಳ್ಳಂ ಬೆಳಗ್ಗೆ ಮೈಸೂರಿನ ಹೊರವಲಯದ ಶ್ರೀ ನಗರದಲ್ಲಿ ನಡೆದಿದೆ. ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು.

ಮಗನಿಂದಲೇ ತಂದೆ ಹಾಗೂ ತಂದೆಯ ಜೊತೆಗಿದ್ದ ಮಹಿಳೆಯನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆ.ಜಿ ಕೊಪ್ಪಲು ನಿವಾಸಿಯಾಗಿರುವ ತಂದೆ ಶಿವಪ್ರಕಾಶ್ ಅವರನ್ನು ಆರೋಪಿ ಸಾಗರ್ ಕೊಲೆ ಮಾಡಿ ಎಸ್ಕೇಪ್​ ಆಗಿದ್ದಾನೆ ಎನ್ನಲಾಗಿದೆ.

ಮೈಸೂರಿನ ಶ್ರೀನಗರದ ನಿವಾಸಿ ಲತಾ ಮನೆಗೆ ನುಗ್ಗಿ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೊದಲು ತಂದೆಯನ್ನು ಮಚ್ಚಿನಿಂದ ಕೊಲೆ ಮಾಡಿರುವ ಮಗ ಸಾಗರ್, ಬಳಿಕ ಲತಾಳನ್ನು ಕೊಲೆ ಮಾಡಿದ್ದಾನಂತೆ.

ಈ ವೇಳೆ ಆರೋಪಿಯನ್ನು ತಡೆಯಲು ಮುಂದಾದ ಲತಾ ಪುತ್ರ ನಾಗಾರ್ಜುನ ಎಂಬಾತನ ಮೇಲೂ ಸಾಗರ್ ಹಲ್ಲೆ ನಡೆಸಿದ್ದಾನಂತೆ.

ಗಾಯಗೊಂಡಿರುವ ನಾಗಾರ್ಜುನ ಆಸ್ಪತ್ರೆ ದಾಖಲು ಮಾಡಲಾಗಿದೆ. , ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!