February 21, 2026

Newsnap Kannada

The World at your finger tips!

mylar

ಪ್ರಾಯಶ್ಚಿತ್ತಕ್ಕಾಗಿ ಡಿಕೆಶಿ ಮೈಲಾರಲಿಂಗೇಶ್ವರನಿಗೆ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆ

Spread the love

ಪಾಪ ಪ್ರಾಯಶ್ಚಿತ್ತ ಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವ ಕುಮಾರ್ ಶುಕ್ರವಾರ ಹೂವಿನ ಹಡಗಲಿ ತಾಲೂಕಿನ ಮೈಲಾರದಲ್ಲಿನ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ
1ಕೆ ಜಿ ತೂಕದ ಹೆಲಿಕಾಪ್ಟರ್ ಕಾಣಕೆ ನೀಡಿದರು.

ಈ ಹಿಂದೆ ಮೈಲಾರಲಿಂಗೇಶ್ವರ ದೇವರ ದರ್ಶನಕ್ಕೆ ಹೆಲಿಕಾಪ್ಟರ್ ನಲ್ಲಿ ಡಿಕೆಶಿ ಆಗಮಿಸಿದ್ದರು. ಆದರೆ ಮೈಲಾರಲಿಂಗೇಶ್ವರ ದರ್ಶನಕ್ಕೆ ಬರಲು ಹೆಲಿಕಾಪ್ಟರ್ ಬಳಕೆ ಮಾಡುವಂತಿಲ್ಲ ಹಾಗೂ ದೇವಸ್ಥಾನದ ಸುತ್ತಮುತ್ತ ಹೆಲಿಕಾಪ್ಟರ್ ಆಕಾಶದಲ್ಲಿ ಹಾರಾಡುವಂತಿಲ್ಲ. ಈ ಸಂಪ್ರದಾಯ ವನ್ನು ಡಿಕೆಶಿ ಮುರಿದು ಹೆಲಿಕಾಪ್ಟರ್ ನಲ್ಲೇ ಆಗಮಿಸಿದ್ದರು.

ಈ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಡಿಕೆಶಿ ಸಂಕಷ್ಟದಲ್ಲಿ ಸಿಲಿಕಿದ್ದಾರೆ. ತಾವು ಮಾಡಿದ ತಪ್ಪಿನ ಪ್ರಾಯಶ್ಚಿತ್ತಕ್ಕೆ ಇಂದು ದೇವಸ್ಥಾನಕ್ಕೆ ಆಗಮಿಸಿ ಪ್ರಮೋದ ಭಟ್ , ಸಚ್ಚಿನ್ ಭಟ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ತಾವು ತಂದಿದ್ದ ಬೆಳ್ಳಿ ಹೆಲಿಕಾಪ್ಟರ್ ಅನ್ನು ಸಮರ್ಪಿಸಿ ಧನ್ಯರಾದರು.

error: Content is protected !!