“ಗುರುವಿನ ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ”ಎಂಬಂತೆ ವಿದ್ಯಾರ್ಥಿಗಳು ಗುರುವಿನ ಗುಲಾಮನಾದಾಗಲೇ ಅಪ್ರತಿಮ ಬದುಕು ರೂಪಿಸಿಕೊಳ್ಳುವನು ಎಂಬುದು ಅಕ್ಷರಶಃ ಸತ್ಯ.
ಅಕ್ಷರಗಳ ಕಲಿಸುತ ಪಾಠವ ಬೋಧಿಸುತ ತಿದ್ದಿ ತೀಡಿ ಸುಂದರ ಶಿಲ್ಪಿಯನ್ನಾಗಿ ರೂಪಿಸುತ ಮೆಣದಂತೆ ಉರಿಯುತ ತನ್ನೆಲ್ಲ ಜ್ಞಾನವನ್ನು ಧಾರೆಯೆರೆಯುವವನೆ ಶಿಕ್ಷಕ.ವಿದ್ಯಾರ್ಥಿಗಳಿಗಾಗಿ ತನ್ನ ಬದುಕನ್ನೇ ಮೀಸಲಿಡುತ ತನ್ನ ಮಕ್ಕಳಿಗಿಂತ ಹೆಚ್ಚಾಗಿ ಕಾಳಜಿ ವಹಿಸುವ ವಾತ್ಸಲ್ಯದ ಸಾಕಾರಮೂರ್ತಿ.ಕಪ್ಪು ಹಲಗೆಯ ಮೇಲೆ ಬಳಪದಿಂದ ಬರೆಯುತ್ತಾ ನಮ್ಮೊಳಗೆ ಜ್ಞಾನದ ದೀಪವನ್ನು ಬೆಳಗಿಸುವ ಪ್ರಕಾಶಮಾನತೆಯ ಪ್ರತೀಕ.ಎಷ್ಟೇ ಕಷ್ಟಗಳಿದ್ದರೂ ನುಂಗಿ ವಿದ್ಯಾರ್ಥಿಗಳ ಬಾಳಿಗೆ ಸನ್ಮಾರ್ಗದ ದಾರಿ ತೋರುವ ದಾರಿದೀಪ.ನಮ್ಮೊಳಗಿನ ಅಜ್ಞಾನದ ಅಂಧಕಾರ ಅಳಿಸಿ ಸುಜ್ಞಾನದ ಜ್ಯೋತಿ ಹೊತ್ತಿಸುವ ಕಾರುಣ್ಯದ ಕರುಣಾಕರ.ಎಂತಹ ವಿದ್ಯಾರ್ಥಿಯೇ ಇದ್ದರೂ ಅವನನ್ನು ಒಳ್ಳೆಯ ಮೂರ್ತಿಯನ್ನಾಗಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿ ರಾಷ್ಟ್ರದ ನಿರ್ಮಾತೃನಾಗಿ ನಿಷ್ಠೆಯಿಂದ ಕಾರ್ಯ ಮಾಡುತ ದೇಶದ ಏಳಿಗೆಗೆ ಸದಾ ತುಡಿಯುವವ ಭಗವಂತನ ಸ್ವರೂಪಿಯೇ ಶಿಕ್ಷಕರು.
ರಾಷ್ಟ್ರದ ಶಕ್ತಿಯಾಗಿ ಸದಾ ಕಾರ್ಯತತ್ಪರರಾಗುತ ಪ್ರೀತಿ ಮಮತೆಗೆ ಆದಿಯಾಗಿ ನಿಷ್ಠೆ ಪ್ರಾಮಾಣಿಕತೆಯಿಂದ ವಿದ್ಯೆ ಧಾರೆ ಎರೆಯುತ ಮಾನವೀಯ ಮೌಲ್ಯಗಳನು ಬಿತ್ತುತ ಭರವಸೆಯ ತುಂಬುತ್ತಾ ಗುರಿಯತ್ತ ಮುನ್ನಡೆಯಲು ಧೈರ್ಯ ತುಂಬುತ್ತಾನೆ ಜೊತೆಗೆ ಆ ಗುರಿ ಸಾಧಿಸಲು ಬೇಕಾದ ಮಾರ್ಗಗಳನ್ನು ತನ್ನ ಜ್ಞಾನ ವಿವೇಚನೆಗೆ ಅನುಗುಣವಾಗಿ ಅರಿವು ಮೂಡಿಸಿ ಆದರ್ಶ ಬದುಕಿಗೆ ಬೆಳಕಾಗುತ್ತಾನೆ.ಪ್ರತಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ ಅವರ ಬುದ್ಧಿ ಮಟ್ಟಕ್ಕೆ ಅನುಸಾರದಂತೆ ಸರಳ ಸುಲಲಿತವಾಗಿ ಮನ ಮುಟ್ಟುವಂತೆ ಉದಾಹರಣೆಗಳ ಮೂಲಕ ಯಾವುದೆ ಪರಿಕಲ್ಪನೆಯನ್ನು ಧಾರಾಳವಾಗಿ ಅರ್ಥೈಸುವ ಶಕ್ತಿ ಇರುವುದು ಶಿಕ್ಷಕನಿಗೆ ಮಾತ್ರ.ಹಾಗಾಗಿ ಪ್ರತಿ ಮಗುವಿನ ಏಳಿಗೆಯಲ್ಲಿ ತಂದೆ ತಾಯಿ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಪಾತ್ರ ಗುರುವಿನದ್ದೂ ಇದ್ದೆ ಇದೆ.ಪಾಲಕರು ಸಂಸ್ಕಾರ ಸಂಸ್ಕೃತಿ ಕಲಿಸಿದರೆ ಗುರುಗಳು ಸಮಯ ಪ್ರಜ್ಞೆ,ಕೌಶಲ್ಯಗಳು,ಶಿಸ್ತು ಸಂಯಮ ,ಜೊತೆಗೆ ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣಕ್ಕೆ ಪೂರಕವಾದ ಸಕಲ ರೀತಿಯಿಂದ ಸಲಹುವವರು ಗುರುಗಳು.
ವಿಭಿನ್ನ ರೀತಿಯ ವಿದ್ಯಾರ್ಥಿಗಳು ತರಗತಿಯಲ್ಲಿರುವರು ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಹೆಕ್ಕಿ ತೆಗೆದು ಸದಾ
ಮಾರ್ಗದರ್ಶನ ಮಾಡುತ್ತ ಹುರುಪು ಆತ್ಮವಿಶ್ವಾಸ ತುಂಬುವವರು ಗುರುಗಳು.ಪಠ್ಯಪುಸ್ತಕ ಅಷ್ಟೇ ಅಲ್ಲದೆ ಪ್ರಪಂಚದ ಆಗು ಹೋಗುಗಳ ಬಗೆಗಿನ ಪ್ರಚಲಿತ ವಿಷಯಗಳನ್ನು ತಿಳಿಸುತ್ತಾ ನಮ್ಮೊಳಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸುತ್ತ ಜಗತ್ತಿನ ಬದಲಾವಣೆಯನ್ನು ತಿಳಿಸುವರು.ಯಾವುದೇ ವಿದ್ಯಾರ್ಥಿ ತಪ್ಪು ದಾರಿ ಹಿಡಿದರೂ ಅವನನ್ನು ಒಳ್ಳೆಯ ದಾರಿಗೆ ತಂದು ಆದರ್ಶ ವಿದ್ಯಾರ್ಥಿಯಾಗಿ ಬೆಳೆಸುವ ಚಾಣಾಕ್ಷತನ ಮತ್ತು ಅವನೊಳಗೆ ಪರಿವರ್ತನೆ ತರುವ ಅಧಮ್ಯ ಶಕ್ತಿ ಇರುವುದು ನಿಸ್ವಾರ್ಥ ಜೀವಿ ಗುರುವಿಗೆ.
ಯಾವುದೇ ಶಿಕ್ಷಕರು ತಮ್ಮ ತನು ಮನ ದಿನದಿಂದ ಮಕ್ಕಳ ಏಳಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸತ್ಪ್ರಜೆಗಳನ್ನಾಗಿ ನಿರ್ಮಾಣ ಮಾಡುವ ಹೊಣೆಗಾರಿಕೆ ಇರುತ್ತದೆ.ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಯಲ್ಲಿ ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳು ಅಥವಾ ಸಲಹೆಗಳು
1.ವಿದ್ಯಾರ್ಥಿಗಳ ಬೌಧಿಕ ಮಟ್ಟ ಅರಿಯಬೇಕು.
2.ವಿದ್ಯಾರ್ಥಿಗಳಿಗೆ ಹೇಳುವ ವಿಧಾನದಲ್ಲಿ ಬದಲಿಸಬೇಕು.
3.ಉದಾಹರಣೆ ಮೂಲಕ ಪಾಠವನ್ನು ಹೇಳುವುದರಿಂದ ಬೆಗನೇ ವಿಷಯ ಗ್ರಹಿಸಬಹುದು
4.ಸೃಜನಶೀಲತೆ ಅರಿವು ಮೂಡಿಸಬೇಕು
5.ವಿದ್ಯಾರ್ಥಿಗಳ ಆಸಕ್ತಿ,ಕುತೂಹಲತೆಯ ಬಗ್ಗೆ ಅಭ್ಯಸಿಸಬೇಕು
6.ಅವರೊಳಗಿನ ಪ್ರತಿಭೆಯನ್ನು ಹುಡುಕಿ ಅದಕ್ಕೆ ಪೂರಕ ಮಾರ್ಗದರ್ಶನ ನೀಡಬೇಕು.
7.ಪಠ್ಯದ ಜೊತೆ ನೀತಿ ಕಥೆಗಳನು ಹೇಳಬೇಕು
8.ಪ್ರಸ್ತುತತೆಗೆ ತಕ್ಕಂತೆ ವಿಷಯಗಳನು ಮನದಟ್ಟು ಮಾಡಬೇಕು.
9.ಪ್ರೇರಕ ಮತ್ತು ಸ್ಫೂರ್ತಿದಾಯಕ ವ್ಯಕ್ತಿಗಳ ಬಗ್ಗೆ ಹೇಳಬೇಕು
10.ಸಾಧಕರ ಬಗ್ಗೆ ತಿಳಿಸುತ್ತ ಅವರೊಳಗೆ ಬದುಕಿನ ಬಗ್ಗೆ ಛಲವನ್ನು ಉತ್ತಬೇಕು.
ಇವೆಲ್ಲ ಅಂಶಗಳಿಗೆ ಅನುಗುಣವಾಗಿ ಎಲ್ಲ ಗುರುಗಳು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದೆ ಆದರೆ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುವುದಲ್ಲದೆ ಅಸಂಖ್ಯಾತ ವಿದ್ಯಾರ್ಥಿಗಳ ಬಾಳು ಬಂಗಾರವಾಗಿ ದೇಶದ ಮಾದರಿ ವ್ಯಕ್ತಿಗಳಾಗಿ ಬಾಳಿ ಕಲಿಸಿದ ತಂದೆ ತಾಯಿಗೆ ತಪ್ಪಿದಾಗ ತಿದ್ದಿ ಬೈದು ಶಿಕ್ಷಿಸಿ ಸರಿ ದಾರಿ ತೋರಿದ ಗುರುವಿಗೆ.ಊರಿಗೆ ಅಲ್ಲದೆ ನಾಡಿಗೆ ಹೆಸರು ತಂದು ಆದರ್ಶ ವಿದ್ಯಾರ್ಥಿಯಾಗಿ ಸಮಾಜದಲ್ಲಿ ಗೌರವಿಸಲ್ಪಡುತ್ತಾನೆ.ಹಾಗಾಗಿ ಒಬ್ಬ ವಿದ್ಯಾರ್ಥಿ ಒಂದು ದೇಶದ ಆಸ್ತಿ ಇದ್ದಂತೆ.ಇದೆಲ್ಲವೂ ಪ್ರತಿ ಶಿಕ್ಷಕರ ಮೂಲ ಜವಾಬ್ದಾರಿ.
ಇಷ್ಟೆಲ್ಲ ಗುರುವಿನ ಬಗ್ಗೆ ಹೇಳಲು ಕಾರಣವಿಷ್ಟೇ ಪ್ರತಿವರ್ಷ ಸೆಪ್ಟೆಂಬರ್ 5 ರಂದು ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಆಚರಿಸುತ್ತಾರೆ .ಈ ದಿನ ನಾವೆಲ್ಲ ನೆನೆಯಬೇಕಾದದ್ದು ಶ್ರೇಷ್ಠ ಧೀಮಂತ ಮುತ್ಸರ್ಜಿ,ಶಿಕ್ಷಣ ತಜ್ಞ ತತ್ವಜ್ಞಾನಿ ಶಿಕ್ಷಕರಲ್ಲೇ ದೇವರನ್ನು ಕಂಡ ದೈವ ಸ್ವರೂಪಿ ಭಾರತದ ಮೊದಲ ಉಪರಾಷ್ಟ್ರಪತಿ,ಮತ್ತು ಎರಡನೇ ರಾಷ್ಟ್ರಪತಿಯಾದ ಸರ್ವಪಲ್ಲಿ ರಾಧಾಕೃಷ್ಣನ ಅವರನ್ನು ಏಕೆಂದರೆ ಒಂದು ದಿನ ವಿದ್ಯಾರ್ಥಿಗಳು ರಾಧಾಕೃಷ್ಣನ್ ಅವರನ್ನು ಸರ್ ನಾವು ನಿಮ್ಮ ಹುಟ್ಟು ಹಬ್ಬ ಆಚರಿಸಬೇಕೆಂದು ತೀರ್ಮಾನಿಸಿದ್ದೇವೆ ಅನುಮತಿ ನೀಡುವಿರಾ ಎಂದು ಕೇಳಲು ಹೋದಾಗ ರಾಧಾಕೃಷ್ಣನ್ ಅವರು ಹೇಳಿದರಂತೆ ನನ್ನ ಜನ್ಮದಿನವೆಂದು ಆಚರಿಸುವ ಬದಲು ಶಿಕ್ಷಕರ ದಿನಾಚರಣೆ ಎಂದು ಆಚರಿಸಿ ಎಂದು ಹೇಳಿದ್ದರಂತೆ ಅವರ ಅಣತಿಯಂತೆ ವಿದ್ಯಾರ್ಥಿಗಳು ಶಿಕ್ಷಕರ ದಿನಾಚಾರಣೆಯಾಗಿ ಆಚರಿಸಲು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಪ್ರತಿಯೊಬ್ಬ ವಿದ್ಯಾರ್ಥಿ ಸೆಪ್ಟೆಂಬರ್ 5 ತಮಗೆ ವರ್ಷಪೂರ್ತಿ ವಿದ್ಯೆಯನ್ನು ಕರುಣಿಸಿದ ಗುರುವಿಗೆ ಶುಭಾಶಯ ತಿಳಿಸಿ ಧನ್ಯವಾದಗಳನ್ನು ಅರ್ಪಿಸುತ್ತಾರೆ.ಸಿದ್ದರಾಮಯ್ಯ ನ್ಯಾಯಾಲಯದ ತೀರ್ಪು ಬರುವ ಮೊದಲು ರಾಜೀನಾಮೆ ನೀಡಲಿ: ಬಿ ಎಸ್ ಯಡಿಯೂರಪ್ಪ
ನಾವು ಎಷ್ಟೇ ದೊಡ್ಡವರಾಗಿ,ಉನ್ನತ ಹುದ್ದೆ ಏರಿದರೂ ಎಂದಿಗೂ ಗುರುವಿನ ಸ್ಥಾನ ಬದಲಾಗದು ಯಾವಾಗಲೂ ಗುರುವೇ ದೊಡ್ಡವನು ಅವನ ಆಶೀರ್ವಾದವೇ ಸಾಧನೆಗೆ ಬಲವು ಬದುಕಿಗೆ ವರವು.ಗುರುವನ್ನು ನೆನೆದಾಗಲೇ ದಿನಕೆ ಅರ್ಥವು.ಒಂದೊಂದು ತುತ್ತು ಸವಿಯುವಾಗ ನೆನೆಯುವೆ ಗುರುವೇ ನೀವಿಲ್ಲದಿದ್ದರೆ ನಮ್ಮ ಬದುಕಿಗೆ ಅರ್ಥವಾದರೂ ಸಿಕ್ಕಿತೆ ನೀವು ಅಂದು ಹೊಡೆದು ಕಲಿಸಿದ್ದಕ್ಕೆ ನಾವಿಂದು ಒಳ್ಳೆಯ ಉದ್ಯೋಗದಲ್ಲಿದ್ದೇವೆ.
ಗುರುವೇ ನಿಮ್ಮನು ನೆನೆವೆ ಅನುದಿನ.ನೀವೇ ಎನ್ನ ಬಾಳಿಗೆ ಪ್ರೇರಣ ಬರಡಾದ ಬದುಕಿಗೆ ತುಂಬಿದಿರಿ ಆತ್ಮವಿಶ್ವಾಸದ ಹೂರಣ.ಬೆಳಗಿತು ಬದುಕಿನ ಹೊಂಗಿರಣ.ತೀರಿಸಲಾಗದು ಗುರುವೇ ನಿಮ್ಮ ಋಣ ಸದಾ ಸ್ಮರಿಸುವೆ ನಿಮ್ಮ ನಿಸ್ವಾರ್ಥದ ಗುಣ.ಎಲ್ಲರೂ ಗುರುವನ್ನು ಗೌರವಿಸಿ ದೇವರಂತೆ ನಿತ್ಯ ನಮಿಸಿ.ಗುರುವೇ ನಿನ್ನ ಕಾರ್ಯಕೆ ನಮೋನಮ.ನಿಮ್ಮ ಪದತಲದಿ ಕಲಿತ ಈ ಜನ್ಮ ಪಾವನ.ನೀವೇ ನನ್ನ ಪಾಲಿಗೆ ಸಕಲವೂ ಪ್ರಭುವೆ.
ಅವಿನಾಶ ಸೆರೆಮನಿ
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು