ನಟ ಜಗ್ಗೇಶ್ ಅಭಿನಯದ ಬೇಡ ಕೃಷ್ಣ ರಂಗಿನಾಟ ಸಿನಿಮಾದ ಒಂದು ಸೀನ್ ನಾಗರಪಂಚಮಿಯ ದಿನವಾದ ಇಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಕುರಿತಂತೆ ನಟ ಜಗ್ಗೇಶ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬೇಡ ಕೃಷ್ಣ ರಂಗಿನಾಟ 1994ರಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾವನ್ನು ರಾಜ್ ಕಿಶೋರ್ ನಿರ್ದೇಶನ ಮಾಡಿದ್ದರು. ಜಗ್ಗೇಶ್‍ಗೆ ಜೋಡಿಯಾಗಿ ಪಾಯಲ್ ಮಲ್ಹೋತ್ರ ಮತ್ತು ಸಿಂಧುಜಾ ನಟಿಸಿದ್ದರು. ಈ ಸಿನಿಮಾದಲ್ಲಿ ಜಗ್ಗೇಶ್ ಕತ್ತಿಗೆ ಹಾವನ್ನು ಸುತ್ತಿಕೊಂಡಿರುವ ದೃಶ್ಯ ಬರುತ್ತದೆ. ಈ ವೇಳೆ ಜಗ್ಗೇಶ್ ಕತ್ತಿನಲ್ಲಿ ನಿಜವಾದ ಹಾವೇ ಇತ್ತು ಎಂದು ಹೇಳಿದ್ದಾರೆ.
ಈ ದೃಶ್ಯದ ಶೂಟಿಂಗ್ ಬಗ್ಗೆ ಜಗ್ಗೇಶ್ ವಿವರಣೆ ನೀಡಿ ಅದು ನಿಜಕ್ಕೂ ಅದ್ಭುತ ದೃಶ್ಯ. ಆದರೆ ಅಂದಿನ ದಿನ ಹೃದಯ ಬಾಯಿಗೆ ಬಂದಿತ್ತು. ಕಾರಣ ಆ ಹಾವು ಹಿಡಿದು ಮೂರು ದಿನ ಆಗಿತ್ತು ಅಷ್ಟೇ. ಅಲ್ಲಿ ಆಡಿರುವುದು ಸಂಭಾಷಣೆ ಅಲ್ಲ, ಭಯಕ್ಕೆ ನಿರ್ದೇಶಕನ ಬೈದದ್ದು. ನಂತರ ಡಬ್ಬಿಂಗ್‍ನಲ್ಲಿ ಬೇರೆ ಸಂಭಾಷಣೆ ಹೇಳಿದೆ.
ಚಿತ್ರದ ನಿರ್ದೇಶಕ ನಮ್ಮ ಗುರುಗಳು ರಾಜಕಿಶೋರ್. ಸತ್ತು 17 ವರ್ಷ ಆಯಿತು. ಅವರ ಹಳೆ ನೆನಪು ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ