ನಿನ್ನೆ ರಾಜ್ಯಸಭೆಯಲ್ಲಿ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ೮ ಜನ ಅಮಾನತುಗೊಂಡ ಸಂಸದರು ಸಂಸತ್ ನ ಬಳಿ ರಾತ್ರಿಪೂರ ಧರಣಿ ನಡೆಸಿದರು.
ಪ್ರತಿಭಟನಾ ನಿರತ ಸಂಸದರು ಪ್ರತಿಭಟನೆಯ ವೇಳೆ ಘೋಷಣೆಗಳನ್ನು ಕೂಗುತ್ತ, ಕೃಷಿ ಮಸೂದೆಗಳ ವಿರುದ್ಧ ಫಲಕಗಳನ್ನು ಪ್ರದರ್ಶಿಸುತ್ತ ಧರಣಿ ನಡೆಸಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕಾಂಗ್ರೆಸ್ ನಾಯಕ ಮಲಿಕಾರ್ಜುನ್ ಖರ್ಗೆ, ಗುಲಾಂ ನಬೀ ಆಜಾದ್, ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮುಂತಾದವರು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ, ಧರಣಿಗೆ ಬೆಂಬಲ ಸೂಚಿಸಿದರು.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು