January 6, 2025

Newsnap Kannada

The World at your finger tips!

police 1

ಮಂಡ್ಯ ನ್ಯೂ ತಮಿಳು ಕಾಲೋನಿ- ಮಗಳ ಶವದೊಂದಿಗೆ ಮೂರು ದಿನ ಕಳೆದ ತಾಯಿ

Spread the love

ಮಂಡ್ಯನಗರದ ಹಾಲಹಳ್ಳಿ ಬಡಾವಣೆಯ ನ್ಯೂ ತಮಿಳು ಕಾಲೋನಿಯಲ್ಲಿ ಅನಾರೋಗ್ಯದಿಂದ ಮೃತಪಟ್ಟ ಮಗಳ ಶವದೊಂದಿಗೆ ತಾಯಿ ನಾಲ್ಕು ದಿನ ಕಳೆದಿದ್ದಾರೆ.ಸೋಮವಾರ ಅಕ್ಕಪಕ್ಕದ ಮನೆಯವರು ಗಮನಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಮಂಡ್ಯದ ಕಾಲೋನಿಯ ನಿವಾಸಿಯೂ ಆದ ಗೃಹ ರಕ್ಷಕ ದಳದ ಸಿಬ್ಬಂದಿ ರೂಪಾ (32) ಮೃತ ಯುವತಿ.

ಹತ್ತು ವರ್ಷದ ಹಿಂದೆ ವಿವಾಹವಾಗಿರುವ ಈಕೆಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಐದು ವರ್ಷದಿಂದ ಗಂಡ, ಮಕ್ಕಳಿಂದ ದೂರಾಗಿ ತಾಯಿಯೊಂದಿಗೆ ವಾಸವಿದ್ದರು. ಈಕೆಯ ತಾಯಿ ಸ್ವಲ್ಪ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದೆ. ತಾಯಿ ಮತ್ತು ಮಗಳ ನಡುವೆ ಸಣ್ಣಪುಟ್ಟ ಜಗಳ ನಡೆಯುತ್ತಿದ್ದರೂ, ನಂತರ ಸರಿ ಹೋಗುತ್ತಿದ್ದರು. ಕಳೆದ ನಾಲ್ಕು ದಿನದಿಂದ ರೂಪಾ ಕಾಣಿಸಿದಿರುವುದನ್ನು ಸ್ಥಳೀಯರು ಗಮನಿಸಿದ್ದರು. ಆದರೂ ಎಲ್ಲಿಯೋ ಹೋಗಿರಬೇಕೆಂದು ಸುಮ್ಮನಾಗಿದ್ದರು. ಈ ನಡುವೆ ಮನೆಯ ಒಳಗಿನಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಕಂಡು ಸೋಮವಾರ ನೋಡಲಾಗಿ ಮೃತದೇಹ ಕೊಳೆತು ವಾಸನೆ ಬರಲಾರಂಭಿಸಿದೆ.

ಇದನ್ನು ಓದಿ –ಬೆಂಗಳೂರಿನಲ್ಲಿ ಟಿಕಾಯಿತ್ ಮುಖಕ್ಕೆ ಮಸಿ ವ್ಯಕ್ತಿಗೆ ಥಳಿತ

ಶವದ ಪಕ್ಕದಲ್ಲಿಯೇ ತಾಯಿ ಅಸ್ವಸ್ಥಳಾಗಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು, ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದರು.ಲೋ ಬಿಪಿಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಘಟನೆ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!