ಮಂಡ್ಯ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಪುತ್ರಿಯ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಮಂಡ್ಯ ಕಲ್ಲಹಳ್ಳಿ ಬಡಾವಣೆಯಲ್ಲಿ ಜರುಗಿದೆ.
ಕಲ್ಲಹಳ್ಳಿಯ ದರ್ಶನ್ (17) ಮೃತ ಯುವಕ. ಅದೇ ಬಡಾವಣೆಯಲ್ಲಿದ್ದ ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಲಿಂಗು ಅವರ ಪುತ್ರಿಯನ್ನು ಆ ಯುವಕ ಪ್ರೀತಿಸುತ್ತಿದ್ದನು. ತಾನು ಪ್ರೀತಿಸುತ್ತಿದ್ದ ದರ್ಶನ್ ಮರೆಯುವಂತೆ ಪೋಷಕರು ಪದೇ ಪದೇ ಹೇಳುತ್ತಿದ್ದರೂ ಪ್ರೀತಿ ಯನ್ಮು ನಿಲ್ಲಿಸಿರಲಿಲ್ಲ.
ಇದರಿಂದ ಕುಪಿತಗೊಂಡ ಶಿವಲಿಂಗು ಆತನ ಹುಡುಗರು, ನಿನ್ನೆ ದರ್ಶನ್ ನನ್ನು ಮನೆಗೆ ಎಳೆದೊಯ್ದು ಹಲ್ಲೆ ನಡೆಸಿದ್ದರು.
ಈ ಘಟನೆಯಲ್ಲಿ ಗಾಯಗಳು ದರ್ಶನ್ ನನ್ನು ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದನು.
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಕಲ್ಲಹಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ:
ಈ ಘಟನೆಯ ನಂತರ ಕಲ್ಲಹಳ್ಳಿ ಯಲ್ಲಿ ಪ್ರಕ್ಷುಬ್ಧವಾಗಿದೆ. ಬಿಗಿಯಾದ ಪೋಲಿಸ್ ಬಂದೋಬಸ್ಸು ಹಾಕಲಾಗಿದೆ.
ತಂದೆಯ ಬಂಧನ – ಎಸ್ ಐ ವಶಕ್ಕೆ :
ಯವಕನ ಹತ್ಯೆ ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಯುವತಿ ತಂದೆ , ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗ ಹಾಗೂ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಕುಮಾರ್ ಬಂಧಿಸಲಾಗಿದೆ.
ನಿನ್ನೆ ಮೃತ ದರ್ಶನ್ ಗೆ ಹಲ್ಲೆ ಮಾಡುವ ವೇಳೆ ಕುಮಾರ್ ಜೊತೆಯಲ್ಲಿದ್ದರು ಎಂಬ ಆರೋಪವಿದೆ.
ಕರ್ತವ್ಯ ನಿರತ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ನ ವಶಕ್ಕೆ ಪಡೆದ ಪೊಲೀಸರು. ವಿಚಾರಣೆ ಮಾಡುತ್ತಿದ್ದಾರೆ.
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
- ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
More Stories
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ