ಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ ಕೊಂಚ ರಿಲೀಫ್ ಸಿಕ್ಕಿದೆ.
ಕೇವಲ ಒಂದು ತಿಂಗಳಲ್ಲೇ ಮೈಸೂರು ಡಿಸಿಯಾಗಿದ್ದ ತಮ್ಮನ್ನು ವರ್ಗಾ ವಣೆ ಆದೇಶ ಮಾಡಿದ್ದ ಸರ್ಕಾರ ನಿರ್ಧಾರದ ವಿರುದ್ಧ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಲಯಕ್ಕೆ ಮೋರೆ
ಹೋಗಿ, ಸಿಂಧೂರಿ ವರ್ಗಾವಣೆ ರದ್ದು ಪಡಿಸುವಂತೆ ಕೋರಿ ಬಿ ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯೂ ಬುಧವಾರವೂ ಮುಂದಕ್ಕೆ ಹೋಗಿದೆ.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಅ. 14 ಕ್ಕೆ ಮುಂದೂಡಿದೆ. ಹೀಗಾಗಿ ಮೈಸೂರು ಡಿಸಿ ಆಗಿ ಸೇವೆ ಸಲ್ಲಿಸುವ ರೋಹಿಣಿಗೆ ಸಧ್ಯಕ್ಕೆ ರಿಲೀಫ್ ಸಿಕ್ಕಿದೆ.
ಈ ನಡುವೆ ಮೈಸೂರಿನಲ್ಲಿ ಕೊರೋನಾ ರುದ್ರ ತಾಂಡವ ಆಡುತ್ತಿದೆ. ಈ ಕೊರೋನಾ ಹಾವಳಿಯನ್ನು ತಹ ಬದಿಗೆ ತರಬೇಕು ಮತ್ತು ಕೊರೋನಾ ನಡುವೆಯೇ ಮೈಸೂರು ದಸರಾ
ಸಂಪ್ರದಾಯಕವಾಗಿ ಆಚರಿಸುವ ಹೊಣೆಗಾರಿಕೆ ಡಿಸಿ ರೋಹಿಣಿಯವರ ಮೇಲಿದೆ. ಎರಡೂ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆನ್ನುವುದನ್ನು ಕಾದು ನೋಡಬೇಕು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು