ಪ್ರೀತಿಯ ಪತ್ನಿಗೆ ಪತಿ ಮಹಾಶಯ ಚಂದ್ರ ಅಂಗಳದಲ್ಲಿ 3 ಎಕರೆ ಭೂಮಿ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾನೆ.
ರಾಜಸ್ಥಾನದ ಅಜ್ಮೇರ್ನ ಧರ್ಮೇಂದ್ರ ಅನಿಜಾ ತನ್ನ 8ನೇ ವಿವಾಹ ವಾಷಿರ್ಕೋತ್ಸವಕ್ಕೆ ಪತ್ನಿ ಸಪ್ನಾಗಾಗಿ ಚಂದ್ರ ಅಂಗಳದಲ್ಲಿ ಮೂರು ಎಕರೆ ಭೂಮಿ ಖರೀದಿಸಿದ್ದಾರೆ.

ಡಿಸೆಂಬರ್ 24ರಂದು ವಿವಾಹ ವಾಷಿರ್ಕೋತ್ಸವ ನಡೆಯಿತು. ಚಂದ್ರನ ಮೇಲೆ ಜಾಗ ಖರೀದಿಸಿದ ಪತ್ರಗಳನ್ನು ಪತ್ನಿ ಸಪ್ನಾಗೆ ಧರ್ಮೇಂದ್ರ ಅನಿಜಾ ಹಸ್ತಾಂತರಿಸಿದ್ದಾರೆ.
ಸಪ್ನಾಗೆ ಏನಾದರೂ ವಿಶೇಷವಾದದ್ದನ್ನು ನೀಡಲು ಬಯಸಿದ್ದೆ. ಹೀಗಾಗಿ ಚಂದ್ರನಲ್ಲಿ 3 ಎಕರೆ ಭೂಮಿ ಖರೀದಿಸಿ ನೀಡಿದ್ದೇನೆ ಎಂದು ಧರ್ಮೇಂದ್ರ ಅನಿಜಾ ತಿಳಿಸಿದ್ದಾರೆ. ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಮೂಲಕ ಭೂಮಿ ಖರೀದಿಸಿದ್ದಾರೆ. ಆದರೆ ಎಷ್ಟು ದುಡ್ಡು ಕೊಟ್ಟು ಖರೀದಿ ಮಾಡಿದ್ದೇನೆ ಎಂಬುದನ್ನು ಎಲ್ಲೂ ಹೇಳಿಲ್ಲ .
ಬಾಲಿವುಡ್ ನಟ ಸುಶಾಂತ್ ಸಿಂಗ್ ಕೂಡ 2018ರಲ್ಲೇ ಚಂದ್ರನ ಮೇಲೆ ಜಾಗ ಖರೀದಿಸಿದ್ದಾಗಿ ಹೇಳಿ ಕೊಂಡಿದ್ದರು.
ಬೋಧ್ ಗಯಾ ನಿವಾಸಿ ನೀರಜ್ ಕುಮಾರ್ ಎಂಬುವವರೂ ಕೆಲ ತಿಂಗಳ ಹಿಂದೆ ತಮ್ಮ ಜನ್ಮದಿನದ ನಿಮಿತ್ತ ಚಂದ್ರನಲ್ಲಿ 1 ಎಕರೆ ಜಾಗ ಖರೀದಿಸಿ ಸುದ್ದಿಯಾಗಿದ್ದರು.
ಚಂದ್ರ ಅಂಗಳಕ್ಕೆ ಮಾನವ ಕಾಲಿಡುವ ಮಾತು ಇದ್ದೇ ಇದೆ. ಈಗಲೇ ಅಲ್ಲಿ ಭೂಮಿ ಖರೀದಿಗೆ ಪೈಪೋಟಿ ನಡೆಯುವುದು ಮಾತ್ರ ದಿಟ.


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ