ಹುಬ್ಬಳ್ಳಿಯ ಸಂತೋಷ ನಗರದ ಕೆರೆಗೆ ಗಂಡ, ಹೆಂಡತಿ ಎದುರಿನಲ್ಲೇ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಜರುಗಿದೆ
ಸಂತೋಷ್ ನಗರದಲ್ಲಿ ಚಿಕ್ಕದಾದ ಟೀಪನ್ ರೂಂ ನಡೆಸುತ್ತಿದ್ದ ರೋಹಿತ್ ಪಟೇಲ್ ಎಂಬಾತನೇ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಬೆಳಿಗ್ಗೆ ಹೆಂಡತಿಯೊಂದಿಗೆ ಕೌಟುಂಬಿಕ ಕಲಹ ಶುರುವಾಗಿದೆ. ಹಲವಾರು ದಿನಗಳಿಂದಲೂ ದಂಪತಿಗಳ ನಡುವೆ ಗಲಾಟೆ ಇತ್ತು. ಇಂದೂ ಸಹ ಮುಂದುವರೆಯಿತು.
ಬೆಳಿಗ್ಗೆ ಗಲಾಟೆ ತಾರಕಕ್ಕೇರಿದ ನಂತರ ಗಂಡ ರೋಹಿತ್ ಪಟೇಲ್ ಸಿದಾ ಸಂತೋಷ್ ನಗರದಲ್ಲಿರುವ ಕೆರೆ ಬಳಿ ಹೋಗಿದ್ದಾನೆ. ಹೆಂಡತಿಯೂ ಆತನ ಹಿಂದೆ ಹೋಗಿದ್ದಾಳೆ. ಕೆರೆ ದಡದ ಬಳಿ ಹೋದ ಈತ ಏಕಾಏಕಿ ಹೆಂಡತಿ ಮಾತು ಕೇಳದೇ ಕೆರೆಗೆ ಹಾರೇ ಬಿಟ್ಟ.
ಆಗ ಹೆಂಡತಿ ಕೂಗಿ ಕೊಂಡು ಅಕ್ಕಪಕ್ಕದ ವರನ್ನು ಸೇರಿಸಿದಳು. ಕೆಲವರು ಕೆರೆ ಹಾರಿ ಈಜಿ ಆತನನ್ನು ಹುಡುಕುವ ಪ್ರಯತ್ನ ಮಾಡಿದರು. ಕೆರೆಯ ಆಳ ಹೆಚ್ಚಾಗಿ ದ್ದರಿಂದ ಆತ ಸಿಗಲೇ ಇಲ್ಲ.
ಹುಬ್ಬಳ್ಳಿಯ ಅಶೋಕ್ ನಗರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ