ಮೃತನನ್ನು ಅರುಣ್(22) ಎಂದು ಗುರುತಿಸಲಾಗಿದೆ, ಈತ ತನ್ನ 18ನೇ ವಯಸ್ಸಿನಲ್ಲೇ ಪೊಲೀಸ್‍ರ ರೌಡಿಶೀಟರ್ ಸೇರಿಕೊಂಡಿದ್ದ. ಆಗಾಗ ಊರಿನಲ್ಲಿ ನಡೆಯುತ್ತಿದ್ದ ಸಣ್ಣ-ಪುಟ್ಟ ಗಲಾಟೆಯಲ್ಲಿ ಭಾಗಿಯಾಗುತ್ತಿದ್ದ. ಇದೀಗ ಜೊತೆಯಲ್ಲಿ ಇದ್ದವರೇ ಆತನನ್ನು ಹೊಡೆದು ಕೊಲೆ ಮಾಡಿದ್ದಾರೆ.2023ನೇ ಸಾಲಿನ ಅಧಿಕೃತ ಸಾರ್ವತ್ರಿಕ ರಜೆ’ಗಳ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ
ನ. 19 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಆರ್ಕೇಸ್ಟ್ರ ಕಾರ್ಯಕ್ರಮ ಕಾರಣವಂತೆ.
ಅರುಣ್ ಹಾಗೂ ಆತನ ಸ್ನೇಹಿತರು ಈ ಹಿಂದೆ ಶಾಸಕ ಡಿಸಿ ತಮ್ಮಣ್ಣ ಅವರ ಬೆಂಬಲಿಗರಾಗಿದ್ದರು. ಆದರೆ ಕನ್ನಡ ರಾಜ್ಯೋತ್ಸವದ ಆರ್ಕೇಸ್ಟ್ರಾದಲ್ಲಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಕದಲೂರು ಉದಯ್ ಅವರ ಫ್ಲೆಕ್ಸ್ ಮಾತ್ರ ಹಾಕಿದ್ದಾರೆ. ಈ ಬಗ್ಗೆ ಅರುಣ್ ಸ್ನೇಹಿತರೊಂದಿಗೆ ಇಷ್ಟು ದಿನ ನೀವು ತಮ್ಮಣ್ಣ ಜೊತೆಗೆ ಇದ್ದು ಈಗ ಉದಯ್ ಫೋಟೋ ಹಾಕಿಸಿದ್ದೀರಾ ಎಂದು ಮಾತನಾಡಿದ್ದಾನೆ.
ಇದೇ ವಿಷಯಕ್ಕೆ. ಜಗಳ ನಡೆದು ಅರುಣ್‍ನನ್ನು ದೊಡ್ಡರಸಿನಕೆರೆ ಗ್ರಾಮದ ದೊಡ್ಡಯ್ಯ, ದೇವರಾಜು, ಅಭಿ, ಗಜ, ಬೆಳ್ಳಾ ರಾಘುಳಿ ಸೇರಿದಂತೆ 8 ಮಂದಿ ನನ್ನ ಮಗನನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಅರಣ್ ತಂದೆ ರಮೇಶ್ ಕೆಎಂ ದೊಡ್ಡಿ ಪೋಲಿಸರಿಗೆ ದೂರು ನೀಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು