ಮಾಡೆಲಿಂಗ್ ಕೆಲಸದ ಆಮಿಷವೊಡ್ಡಿ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡ ಗ್ರಾ ಪಂ ಸದಸ್ಯನೊಬ್ಬ ಆಕೆಗೆ ಗನ್ ತೋರಿಸಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಯುವತಿಯ ನಗ್ನ ಫೋಟೋಗಳನ್ನು ತೆಗೆದು ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬನ್ನೇರುಘಟ್ಟ ಸಮೀಪದ ಬಿಲ್ಲವಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಹಮದ್ ಪಾಷ ಅತ್ಯಾಚಾರ ಆರೋಪಿ.
ಈತನಿಗೆ ಫೇಸ್ಬುಕ್ನಲ್ಲಿ ಬೆಂಗಳೂರಿನ ಹೆಬ್ಬಾಳ ಮೂಲದ ಯವತಿಯೊಬ್ಬಳ ಪರಿಚಯವಾಗಿತ್ತು. ಆಕೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಕೂಡಿಸುವುದಾಗಿ ನಂಬಿಸಿ ಮೊಬೈಲ್ ನಂಬರ್ ಪಡೆದಿದ್ದ. ಅಲ್ಲದೆ ತಾನು ಬನ್ನೇರುಘಟ್ಟ ಕಾರ್ಪೋರೇಟರ್ ಎಂದೂ ಹೇಳಿಕೊಂಡಿದ್ದ. ಅಲ್ಲದೆ ಲಾಕ್ಡೌನ್ ಹಿನ್ನೆಲೆ ಬಡವರಿಗೆ ಆಹಾರ್ ಕಿಟ್ ವಿತರಣೆ ಮಾಡುತ್ತಿರುವ ಫೋಟೋಗಳನ್ನೂ ಆಕೆಗೆ ವಾಟ್ಸ್ಆಯಪ್ ಮೂಲಕ ಕಳಿಸಿ ತಾನೊಬ್ಬ ಸಭ್ಯಸ್ಥ, ಪರೋಪಕಾರಿ ಎಂದೂ ವಿಶ್ವಾಸ ಗಿಟ್ಟಿಸಿಕೊಂಡಿದ್ದನಂತೆ.
ಕೆಲಸ ಕೊಡಿಸುವೆ ಈ ಕುರಿತಂತೆ ಸ್ವಲ್ಪ ಮಾತನಾಡಬೇಕಿದೆ ನನ್ನ ಮನೆಗೆ ಬಾ ಎಂದು ತನ್ನ ಚಾಲಕನ ಮೂಲಕ ಓಲಾಕ್ಯಾಬ್ ಬುಕ್ ಮಾಡಿಸಿ ಶಾನಭೋಗನಹಳ್ಳಿಯ ತನ್ನ ಮನೆಗೆ ಯುವತಿಯನ್ನು ಅಹಮದ್ ಪಾಷ ಕಳೆದ ಸೋಮವಾರ ಕರೆಸಿಕೊಂಡಿದ್ದ.
ಮನೆಗೆ ಬಂದ ಯುವತಿ ಮೇಲೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದಕ್ಕೆ ವಿರೋಧಿಸಿದ ಯುವತಿಗೆ ಗನ್ ತೋರಿಸಿ ಬೆದರಿಸಿದ್ದಾನೆ. ಅಲ್ಲದೆ, ಆಕೆಯ ನಗ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿಯೂ ಹೆದರಿಸಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿರುವ ಅಹಮದ್ ಪಾಷ, ಇದೇ ರೀತಿ ಸುಮಾರು 10 ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ