February 21, 2026

Newsnap Kannada

The World at your finger tips!

basavaraj

ಒಂದು ತಿಂಗಳು ಹಿಂದೆ ಮದುವೆಯಾದ ಅರಣ್ಯಾಧಿಕಾರಿ ಆತ್ಮಹತ್ಯೆ !

Spread the love

ಕೇವಲ ಒಂದು ತಿಂಗಳ ಹಿಂದಷ್ಟೇ ವಿವಾಹ ಮಾಡಿಕೊಂಡದ್ದ ಅರಣ್ಯ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಳ್ಳಾರಿ ಉಪ ವಲಯ ಅರಣ್ಯ ಅಧಿಕಾರಿ ಗಂಗಾವತಿ ಜಾಮಾಪುರ ಗ್ರಾಮದ ಬಸವರಾಜ್ ವೀರಾಪುರ ( 31) ಎಂಬುವವರೇ ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ.
ಸೊಂಡೂರಿನಲ್ಲಿನ ಬಾಡಿಗೆ ಮನೆಯಲ್ಲಿ ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೇವಲ ಒಂದು ತಿಂಗಳು ಹಿಂದಷ್ಟೇ ವಿವಾಹವಾಗಿದ್ದ ಅಧಿಕಾರಿ ಬಸವರಾಜ್ ಪತ್ನಿ ಊರಿನಲ್ಲಿ ಇರಲಿಲ್ಲ ಎಂದು ಗೊತ್ತಾಗಿದೆ.

ಆತ್ಮಹತ್ಯೆ ಗೆ ಯಾವುದೇ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ. ಸೊಂಡೂರು ಪೋಲಿಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!