ಚಿಕ್ಕ ಮಂಡ್ಯ ರಾಮಕೃಷ್ಣ ಚಿತ್ರಮಂದಿರದ ಕಟ್ಟಡದ ಹಿಂಬದಿಯ ಪ್ರದೇಶದ ಜಮೀನಿನಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿವೆ.
ಪುಟ್ಟಸ್ವಾಮಿ ಎಂಬುವವರ ಜಮೀನಿನಲ್ಲಿ ಬೀಡು ಬಿಟ್ಟಿವೆ. ಮಂಡ್ಯ ನಗರಕ್ಕೆ ಸಮೀಪವೇ ಕಾಡಾನೆಗಳು ಪ್ರತ್ಯಕ್ಷ ಗೊಂಡಿರುವುದರಿಂದ ಸಾರ್ವಜನಿಕರು ಆನೆ ನೋಡಲು ಮುಗಿಬಿದ್ದಿದ್ದಾರೆ
ಸುತ್ತಮುತ್ತಲ ಪ್ರದೇಶದ ಜನತೆ ಬೈಪಾಸ್ ರಸ್ತೆ ಹಾಗೂ ಮಂಡ್ಯ – ಚಿಕ್ಕ ಮಂಡ್ಯ ರಸ್ತೆಯಲ್ಲಿ ಸೇರಿದ್ದಾರೆ ಪೊಲೀಸರು ಆನೆಗಳ ಹಿಂಡಿನತ್ತ ಸಾರ್ವಜನಿಕರು ತೆರಳದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಹೊಸ ಬೂದನೂರು ಗ್ರಾಮದಲ್ಲಿ ಭಾನುವಾರ ಪ್ರತ್ಯಕ್ಷಗೊಂಡಿದ್ದ ಆನೆಗಳ ಹಿಂಡು ರಾತ್ರಿ ವೇಳೆ ಚಿಕ್ಕ ಮಂಡ್ಯ ದತ್ತ ಬಂದಿವೆ.ಸಾಲಕ್ಕೆ ಹೆದರಿ ತುಮಕೂರಿನ ಬಳಿ ರೈಲಿಗೆ ತಲೆ ಕೊಟ್ಟ ಆತ್ಮಹತ್ಯೆ : ತಂದೆ-ತಾಯಿ, ಮಗಳ ದುರಂತ ಸಾವು
ಅರಣ್ಯ ಪ್ರದೇಶದಿಂದ ನಾಡಿನತ್ತ ಮುಖ ಮಾಡಿರುವ ಆನೆಗಳ ಹಿಂಡು ಶನಿವಾರ ರಾತ್ರಿ ಅಂಬರಹಳ್ಳಿ ಸಮೀಪದ ಜಮೀನುಗಳಲ್ಲಿ ಕಾಣಿಸಿ ಕೊಂಡಿದ್ದವು. ಇದೀಗ ಮಂಡ್ಯ ನಗರ ಸಮೀಪ ಕಾಣಿಸಿಕೊಂಡಿವೆ.
More Stories
ಸಹಾಯವಾಣಿ ಹೆಸರಲ್ಲಿ ವಂಚನೆ:ಮಹಿಳೆಯಿಂದ ₹2 ಲಕ್ಷ ವಂಚಿಸಿದ ಸೈಬರ್ ಖದೀಮರು
ಮಂಡ್ಯ: ವಿಸಿ ನಾಲೆಗೆ ಕಾರು ಬಿದ್ದ ದುರಂತ – ಮತ್ತೊಬ್ಬನ ಶವ ಪತ್ತೆ, ಸಾವಿನ ಸಂಖ್ಯೆ ಮೂವರಿಗೆ ಏರಿಕೆ
ಕರ್ನಾಟಕ ರಾಜ್ಯ ಕಾನೂನು ವಿವಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ: ಎಫ್ಐಆರ್ ದಾಖಲು