ತನ್ನ ನಾಲ್ವರು ಪುಟ್ಟಹೆಣ್ಣುಮಕ್ಕಳಿಗೆ ವಿಷ ಉಣಿಸಿ ನೀರಿನ ತೊಟ್ಟಿಗೆ ಎಸೆದ ತಂದೆ ತಾನು ಅದರಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಶನಿವಾರ ರಾಜಾಸ್ತಾನದ ಬಾರ್ಮರ್‌ನ ಪೋಶಾಲ ಗ್ರಾಮದಲ್ಲಿ ನಡೆದಿದೆ.
ಆದರೆ ನೀರಿನಲ್ಲಿ ಮುಳುಗಿ ನಾಲ್ಕು ಮಕ್ಕಳು ಮೃತಪಟ್ಟಿದ್ದು, ತಂದೆಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
30 ವರ್ಷದ ಪುರ್ಖಾರಾಮ್ ಎಂಬ ವ್ಯಕ್ತಿ ತನ್ನ ಮಕ್ಕಳಾದ ಒಂಬತ್ತು ವರ್ಷದ ಜಿಯೊ, ಏಳು ವರ್ಷದ ನೊಜಿ, ಮೂರು ವರ್ಷದ ಹೀನಾ ಮತ್ತು ಒಂದೂವರೆ ವರ್ಷದ ಮಗು ಲಾಸಿಗೆ ವಿಷ ನೀಡಿದ್ದಾನೆ.
ನಂತರ ಆ ಮಕ್ಕಳನ್ನು ತನ್ನ ಮನೆಯ ಹೊರಗಿನ 13 ಅಡಿ ಆಳದ ನೀರಿನ ತೊಟ್ಟಿಗೆ ಹಾಕಿದ್ದಾನೆ. ಆಮೇಲೆ ಆತನೂ ಅದರೊಳಗೆ ಧುಮುಕಿದ್ದಾನೆ. ಇದನ್ನು ಕಂಡ ಅಕ್ಕಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪುರ್ಖಾರಾಮ್‌ನನ್ನು ನೀರಿನ ತೊಟ್ಟಿಯಿಂದ ಮೇಲೆತ್ತಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ನಾಲ್ಕು ಮಕ್ಕಳ ಶವಗಳನ್ನು ಸಂಬಂಧಪಟ್ಟವರಿಗೆ ನೀಡಲಾಗಿದೆ. ಐದು ತಿಂಗಳ ಹಿಂದೆ ಕೊರೊನಾದಿಂದ ಪತ್ನಿ ಮೃತಪಟ್ಟಿದ್ದರಿಂದ ಪುರ್ಖಾರಾಮ್ ನೊಂದಿದ್ದರೆಂದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ