ಉತ್ತರ ಪ್ರದೇಶದ ಬಾಂಡಾದ ಬಾಬೇರು ಪ್ರದೇಶದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ.
22 ವರ್ಷದ ಯುವಕನೊಬ್ಬ ದೇವಾಲಯಕ್ಕೆ ತೆರಳಿ ದೇವರ ಎದುರೇ ನಾಲಿಗೆ ಕತ್ತರಿಸಿಕೊಂಡು ಅರ್ಪಣೆ ಮಾಡಿದ್ದಾನೆ.
ಭತಿ ಗ್ರಾಮದ ದೇವಾಲಯೊಂದರಲ್ಲಿ ಆತ್ಮಾರಾಮ್ (22) ದೇವಸ್ಥಾನಕ್ಕೆ ಹೋಗಿದ್ದು ನಾಲಿಗೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ ಎಂದು ಪೋಲೀಸ್ ಠಾಣಾಧಿಕಾರಿ ಜೈ ಶ್ಯಾಮ್ ಶುಕ್ಲಾ ತಿಳಿಸಿದ್ದಾರೆ.
ಘಟನೆ ಶನಿವಾರ ನಡೆದಿದೆ. ಈ ಮಾಹಿತಿ ದೊರೆತ ನಂತರ ಪೋಲೀಸರು ಸ್ಥಳಕ್ಕೆ ತಲುಪಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಆತನ ಸ್ಥಿತಿ ಸ್ಥಿರವಾಗಿದೆ.
ಆತ್ಮಾರಾಮ್ ತಂದೆ ರಾಮ್ ಸಿಂಗ್ ಅವರು ತಮ್ಮ ಮಗ ಮಾನಸಿಕ ಅಸ್ವಸ್ಥನಾಗಿದ್ದಾನೆ. ನವರಾತ್ರಿಯಲ್ಲಿ 9 ದಿನ ಉಪವಾಸ ಆಚರಿಸುತ್ತಿದ್ದ. ಕೆಲವರು ತಮ್ಮ ಮಗನಿಗೆ ದಾರಿ ತಪ್ಪಿಸಿದ್ದಾರೆ. ಹೀಗಾಗಿ ನಾಲಿಗೆ ಕತ್ತರಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು