ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ತಿಕ್ಕಾಟಕ್ಕೆ ಹೊಸ ಟ್ವಿಸ್ಟ್ ನಡುವೆಯೂ ನವ್ಯಶ್ರೀ ಹೊಸ ಬಾಂಬ್ ಹಾಕಿದ್ದಾಳೆ.
ಚನ್ನಪಟ್ಟಣದ ಕಾಂಗ್ರೆಸ್ ಮಹಾನಾಯಕನ ಕೈವಾಡ ಇದೆ, ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟೀಕರಣ ನೀಡುವ ಸಂಬಂಧ ಶನಿವಾರ ಸುದ್ದಿಗಾರರಜೊತೆ ಮಾತನಾಡಿ, ತಮ್ಮ ಪಕ್ಷದ ಮುಖಂಡನ ಬಗ್ಗೆ ನವ್ಯಾಶ್ರೀ ಹೊಸ ಬಾಂಬ್ ಹಾಕಿದ್ದಾರೆ. ನಮ್ಮಿಬ್ಬರ ನಡುವಿನ ಕಚ್ಚಾಟದ ಹಿಂದೆ ಚನ್ನಪಟ್ಟಣ ಕಾಂಗ್ರೆಸ್ನ ಮಹಾನಾಯಕ ಇದ್ದಾನೆ.
ಟಾಕಳೆಯನ್ನು ದಾಳವಾಗಿ ಬಳಸಿಕೊಂಡಿದ್ದಾನೆ ಆ ನಾಯಕ. ಮುಂದಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆ ನಾಯಕ ಎಂದು ಆರೋಪಿಸಿದ್ದಾರೆ.
ಪತ್ರಿಕೆ ಸಂಪಾದಕರೊಬ್ಬರ ಪಾತ್ರವೂ ಇದರಲ್ಲಿ ಇದೆ. ಎಲ್ಲವೂ ತನಿಖೆ ಬಳಿಕ ಮುಖವಾಡ ಕಳಚಲಿದೆ. ಈ ಸಂದರ್ಭದಲ್ಲಿ ಯಾರ ಹೆಸರನ್ನೂ ನಾನು ಉಲ್ಲೇಖಿಸುವುದಿಲ್ಲ ಎಂದು ನವ್ಯಶ್ರೀ ಹೇಳಿದ್ದಾರೆ. ನವ್ಯಶ್ರೀ ಹೇಳಿಕೆ ಬೆನ್ನಲ್ಲೇ ಚನ್ನಪಟ್ಟಣದ ಆ ಕಾಂಗ್ರೆಸ್ ಮಹಾನಾಯಕ ಯಾರು ಎಂಬ ಪ್ರಶ್ನೆ ಎದ್ದಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು