December 23, 2024

Newsnap Kannada

The World at your finger tips!

cobra,bite,child

A child who steps on a cobra - just misses from the jaws of death

ನಾಗರ ಹಾವಿನ ಮೇಲೆ ಕಾಲಿಟ್ಟ ಮಗು – ಸಾವಿನ ದವಡೆಯಿಂದ ಜಸ್ಟ್​ ಮಿಸ್

Spread the love

ಮಂಡ್ಯದ ಚಾಮುಂಡೇಶ್ವರಿ ನಗರ ಬಡಾವಣೆಯಲ್ಲಿ ಹೆಡೆ ಎತ್ತಿ ಕಚ್ಚಲು ಬಂದ ಹಾವಿನಿಂದ ಮಗುವನ್ನು ತಾಯಿಯೇ ರೋಚಕವಾಗಿ ಕಾಪಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮನೆಯಿಂದ ತಾಯಿ ಪ್ರಿಯಾ ಹಾಗೂ ಪುತ್ರ ಹೊರ ಬರ್ತಿದ್ದಂತೆ ಬಾಲಕ ತಿಳಿಯದೇ ಹಾವಿನ ಬಳಿ ಹೆಜ್ಜೆ ಇಟ್ಟಿದ್ದಾನೆ.ಇದನ್ನು ಓದಿ –ಹೊಳೆನರಸೀಪುರ ಕೋರ್ಟ್ ಆವರಣದಲ್ಲೇ ಪತ್ನಿಯ ಹತ್ಯೆ ಮಾಡಿದ ಗಂಡ

ಅದೃಷ್ಟವಶಾತ್​ ಹಾವನ್ನು ಕಂಡ ಕ್ಷಣ ಚೀರಾಡುತ್ತ ಮಗು ಬಳಿ ಬಂದ ತಾಯಿ ಹಾವಿನಿಂದ ಕಾಪಾಡಿದ್ದಾರೆ. ಸದ್ಯ ತಾಯಿ ಸಮಯಪ್ರಜ್ಞೆಯಿಂದಾಗಿ ಮಗು ಅಪಾಯದಿಂದ ಪಾರಾಗಿದೆ.

ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಗು ತಂದೆ ವಿಷ್ಣು ಪ್ರಸಾದ್, ಘಟನೆಯಿಂದ ನಮಗೆಲ್ಲ ಭಯವಾಗಿತ್ತು. ಅದೃಷ್ಟವಶಾತ್ ಯಾವುದೇ ಸಮಸ್ಯೆ ಆಗಲಿಲ್ಲ. ನನ್ನ ಪತ್ನಿ ಪ್ರಿಯಾ ನನ್ನ ಮಗನನ್ನು ಕಾಪಾಡಿದ್ದಾರೆ.

ಘಟನೆಯಿಂದ ನನ್ನ ಪತ್ನಿಗೆ ತುಂಬಾ ಭಯವಾಗಿತ್ತು. ದೇವರ ದಯೆಯಿಂದ ನನ್ನ ಮಗು ಬದುಕಿದೆ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!