March 15, 2026

Newsnap Kannada

The World at your finger tips!

crime,bengaluru,racecourse

ಮಾ.1 ರಂದು ಬೆಂಗಳೂರಿನ ರಾಮಕೃಷ್ಣ ಹೋಟೆಲ್ ಪಾರ್ಕಿಂಗ್ ನಲ್ಲಿ ದಿನೇಶ್ ಗೆ ಸಿಡಿ ಹಸ್ತಾಂತರ

Spread the love

ರಮೇಶ್‌ ಜಾರಕಿಹೊಳಿ ರಾಸಲೀಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ.

ಮಾರ್ಚ್‌ 1 ರಂದು ದಿನೇಶ್‌ ಕಲ್ಲಹಳ್ಳಿಗೆ ಸಿಡಿ ಸಿಕ್ಕಿದೆ. ಬೆಂಗಳೂರಿನ ಗಾಂಧಿನಗರದ ರಾಮಕೃಷ್ಣ ಹೋಟೆಲಿನ ಪಾರ್ಕಿಂಗ್‌ ಜಾಗದಲ್ಲಿ ಸಂತ್ರಸ್ತ ಯುವತಿಯ ಸಂಬಂಧಿಕರು ದಿನೇಶ್‌ ಗೆ ನೀಡಿದ್ದಾರೆ.

ಸಂಬಂಧಿಕರು ದಿನೇಶ್‌ ಅವರಿಗೆ ಸಿಡಿ ನೀಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ದೂರುದಾರ ದಿನೇಶ್‌‌ ಕಲ್ಲಹಳ್ಳಿ ಅವರಿಗೆ ಸಿಡಿ ಎಲ್ಲಿ ಸಿಕ್ಕಿದೆ ಎಂಬ ವಿಚಾರ ಈಗ ಪೊಲೀಸ್‌ ತನಿಖೆಯಿಂದ ಲಭ್ಯವಾಗಿದೆ.

ಈ ಸಂಬಂಧ ಸಿಸಿಬಿ ಪೊಲೀಸರು ಹೋಟೆಲ್‌ಗೆ ಬಂದು ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೇ ಯಾರಿಗೂ ನೀಡಬಾರದು ಎಂದು ಸೂಚಿಸಿದ್ದಾರೆ.

ಕಬ್ಬನ್‌ ಪಾರ್ಕ್‌ ಪೊಲೀಸರು ಮಾತ್ರ ಹೋಟೆಲಿಗೆ ಬಂದಿಲ್ಲ. ಸಿಸಿಬಿ ಪೊಲೀಸರು ಸಹ ಹೋಟೆಲಿಗೆ ಬಂದು ಎರಡು ದಿನದ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ.

ದಿನೇಶ್ ಬಂದು ಹೋಗಿರುವ ಸಂಗತಿ ತಮಗೆ ಗೊತ್ತಾಗಿಲ್ಲ ಎಂದು ಹೋಟೆಲ್ ಮ್ಯಾನೇಜರ್ ತಿಳಿಸಿದ್ದಾರೆ. ‌

error: Content is protected !!