ನಿಂತಿದ್ದ ಲಾರಿಗೆ ಕಾರ್ ಡಿಕ್ಕಿಯಾದ ಪರಿಣಾಮ ಹುಟ್ಬು ಹಬ್ಬದ ಆಚರಣೆಗೆ ಹೋಗಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಹುನಗುಂದ ತಾಲ್ಲೂಕಿನ ಬೇವಿನಮಟ್ಟಿ ಗ್ರಾಮದ ಬಳಿ ಕಳೆದ ರಾತ್ರಿ ಜರುಗಿದೆ.
ವೇಗವಾಗಿ ಬಂದ ಕಾರು ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ ಚಂದ್ರಶೇಖರ ಬುಟ್ಟಾ(22), ನವೀನ್ ಸಾಕಾ( 20), ಚೆನ್ನಬಸವ ಅಂಜಿ(22) ಹಾಗೂ ಬಸವರಾಜ ಭಂಡಾರಿ (33) ಮೃತರು.
ಸಾವನ್ನಪ್ಪಿದವರು ಇಳಕಲ್ ಮೂಲದವರು ಎಂದು ಗೊತ್ತಾಗಿದೆ. ನಾಲ್ವರೂ ಇಳಕಲ್ನಿಂದ ಗುಳೇದಗುಡ್ಡಕ್ಕೆ ಬರ್ತ್ಡೇ ಆಚರಣೆಗೆ ಹೋಗಿದರು. ವಾಪಸ್ ಹುನಗುಂದ ಮಾರ್ಗವಾಗಿ ಇಳಕಲ್ಗೆ ಬರುವಾಗ ದುರ್ಘಟನೆ ನಡೆದಿದೆ.
ಘಟನೆ ನಡೆದ ಕೂಡಲೇ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಹುನಗುಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನೀಡುತ್ತಿದ್ದಾರೆ.
- ಖಾಸಗಿ ವಾಹನಗಳಿಗೆ ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್ ಪರಿಚಯಿಸಲು ಸರ್ಕಾರ ತೀರ್ಮಾನ
- ಬೆಂಗಳೂರಿನಲ್ಲಿ ಜನವರಿ 17ರಿಂದ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ
- ವಿಚಿತ್ರ ಕಾಯಿಲೆಗೆ 15 ಜನರು ಬಲಿಪಡೆದ ಅನುಮಾನಾಸ್ಪದ ಘಟನೆ
- ಆಕಸ್ಮಿಕ ಗುಂಡು ಸಿಡಿದು ವ್ಯಕ್ತಿ ಸಾವು
- ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ
More Stories
ಬೆಂಗಳೂರಿನಲ್ಲಿ ಜನವರಿ 17ರಿಂದ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು