August 3, 2025

Newsnap Kannada

The World at your finger tips!

Bus , fire , national Highway

A bus caught fire near Ganangur toll and was completely gutted ಗಣಂಗೂರು ಟೋಲ್ ಬಳಿ ಬಸ್ ಗೆ ಬೆಂಕಿ ಬಿದ್ದು ಸಂಪೂರ್ಣ ಭಸ್ಮ

ಗಣಂಗೂರು ಟೋಲ್ ಬಳಿ ಬಸ್ ಗೆ ಬೆಂಕಿ ಬಿದ್ದು ಸಂಪೂರ್ಣ ಭಸ್ಮ

Spread the love

ಮಂಡ್ಯ – ಮೈಸೂರು ರಾಷ್ಟ್ರೀಯಹೆದ್ದಾರಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ  ಗಣಂಗೂರು ಟೋಲ್ ಸಂಗ್ರಹ ಬಳಿ ಬಸ್ ವೊಂದಕ್ಕೆ ಆಕಸ್ಮಿಕ ಬೆಂಕಿಗೆ ತಗುಲಿ ಬಸ್ ಸಂಪೂರ್ಣ ಭಸ್ಮವಾಗಿದೆ.

ಈ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಯಾವುದೇ ದುರಂತ ಘಟನೆ ಸಂಭವಿಸಿಲ್ಲ.

ಬಸ್ ಬೆಂಕಿ ಹತ್ತಿಕೊಂಡಿದ್ದರಿಂದ ದಟ್ಟವಾದ ಹೊಗೆಯಿಂದ ಹರಡಿಕೊಂಡಿತು ಜನರಲ್ಲಿ ಆತಂಕ ಮೂಡಿಸಿತ್ತು, ಬಸ್ ಬೆಂಗಳೂರಿನಿಂದ ಮೈಸೂರಿಗೆ ತೆರಳುತಿತ್ತು ಎನ್ನಲಾಗಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸೇಫ್ ಆಗಿ ಕೆಳಗೆ ಇಳಿದಿದ್ದಾರೆ. ನೋಡ ನೋಡುತ್ತಿದ್ದಂತೆ ಬಸ್ ಸುಟ್ಟು ಕರಕಲಾಗಿದೆ.ಮದುವೆಗೆ ತೆರಳುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ಧಾವಿಸಿ ಬೆಂಕಿ ನಂದಿಸಿದ್ದಾರೆ.

ಈ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.ಇದನ್ನು ಓದಿ –ಡಿಕೆಶಿಗೆ ಬಿಗ್ ರಿಲೀಫ್ – ನಾಮಪತ್ರ ಸ್ವೀಕೃತ: ಡಿ ಕೆ ಸುರೇಶ್ ನಾಮಪತ್ರ ಹಿಂದಕ್ಕೆ ?

error: Content is protected !!