ಏ. 10- 20 ರವರೆಗೆ 8 ಜಿಲ್ಲೆಗಳಲ್ಲಿ ರಾತ್ರಿ ಕಫ್ಯೂ೯ ಜಾರಿ – ಸಿಎಂ ಯಡಿಯೂರಪ್ಪ

Team Newsnap
1 Min Read

ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಜಾರಿ ಮಾಡಲು ನಿರ್ಧಾರ ಮಾಡಿದೆ.‌

ರಾಜ್ಯದ 8 ಜಿಲ್ಲಾ ಕೇಂದ್ರಗಳಳ್ಲಿ ರಾತ್ರಿ ಕರ್ಫ್ಯೂ ಅನ್ನು ಏ. 10 ರಿಂದ 20 ರವರೆಗೆ ಕೊರೋನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ.

ಕೊರೋನಾ ಕಂಟ್ರೋಲ್ ಗೆ ಬರದಿದ್ದರೆ ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಲಾಗುತ್ತದೆ. ಅಲ್ಲದೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಸಿಎಂ‌ ಯಡಿಯೂರಪ್ಪ ತಿಳಿಸಿದ್ದಾರೆ.

ಯಾವ ಜಿಲ್ಲಾ ಕೇಂದ್ರಗಳಲ್ಲಿ ರಾತ್ರಿ ಕಫ್ಯೂ ೯

ಬೆಂಗಳೂರು, ಮೈಸೂರು, ಮಂಗಳೂರು,‌ಕಲಬುರಗಿ, ಬೀದರ್ ,ತುಮಕೂರು, ಉಡುಪಿ, ಮಣಿಪಾಲ್‌ಗೆ ಜಿಲ್ಲಾ ಕೇಂದ್ರಕ್ಕೆ ನೈಟ್ ಕರ್ಫ್ಯೂ ಅನ್ವಯವಾಗಲಿದೆ.

ಏಪ್ರಿಲ್ 11 ರಿಂದ 14 ರವರೆಗೆ ಲಸಿಕೆ ಉತ್ಸವ ಆಚರಿಸಲು ನಿರ್ಧಾರ ಮಾಡಲಾಗಿದೆ. ಮೂಲ ಸೇವೆಗಳಿಗೆ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಮಾತ್ರ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಇಡೀ ಜಿಲ್ಲೆಗೆ ಅನ್ವಯ ಆಗಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಅಗತ್ಯ ಸೇವೆಗಳಿಗೆ ತೊಂದರೆ ಇಲ್ಲ. ವಾಹನ ಓಡಾಟ ಇರಲಿದೆ ಆದರೆ ವಾಣಿಜ್ಯ ವ್ಯವಹಾರಗಳು ಸ್ಥಗಿತವಾಗಲಿವೆ.

Share This Article
Leave a comment