ರಾಜ್ಯದಲ್ಲೇ ಮೊದಲ ತೃತೀಯ ಲಿಂಗಿಯೊಬ್ಬರು ಎಲ್ಎಲ್ಬಿ ಮುಗಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮೈಸೂರಿನ ಜಯನಗರದ ನಿವಾಸಿ ಸಿ. ಶಶಿ ಎಂಬುವರು ಎಲ್ಎಲ್ಬಿ ಮುಗಿಸಿ ಲಾಯರ್ ಆದ ರಾಜ್ಯದ ಮೊದಲ ತೃತೀಯ ಲಿಂಗಿ.
ಶಶಿ ನಗರದ ವಿದ್ಯಾವರ್ಧಕ ಕಾಲೇಜಿನಲ್ಲಿ 3 ವರ್ಷದ ಎಲ್ಎಲ್ಬಿ ಕೋರ್ಸ್ ಮುಗಿಸಿದ್ದಾರೆ. ಈ ಕೋರ್ಸ್ ಮುಗಿಸಲು ಸಹಾಯ ಮಾಡಿದ ಎಲ್ಲಾ ಉಪನ್ಯಾಸಕರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
10ನೇ ತರಗತಿ ಓದುವಾಗ ದೇಹದಲ್ಲಿ ಆದ ಬದಲಾವಣೆಯಿಂದ ತೃತೀಯ ಲಿಂಗಿಯಾದರು. ಆ ನಂತರ ಅವರು ತುಂಬಾ ನೋವು, ಅವಮಾನ, ನಿಂದನೆ, ಕಿರುಕುಳಗಳನ್ನು ಅನುಭವಿಸಿದ್ದಾರೆ.
ಸ್ನೇಹಿತರು ಮಾಡಿದ ಆರ್ಥಿಕ ಸಹಾಯದಿಂದ ಪದವಿ ಮುಗಿಸಿದ್ದಾರೆ. ನಾನು ಅನುಭವಿಸಿದ ಕಷ್ಟಗಳನ್ನು ತೃತೀಯ ಲಿಂಗಿಗಳು ಅನುಭವಿಸಬಾರದು, ಅವರ ಕಷ್ಟಗಳಿಗೆ ನಾನು ಧ್ವನಿಯಾಗಬೇಕು ಎಂಬ ಉದ್ದೇಶದಿಂದ ಮುಂದೆ ನಡೆಯುತ್ತೇನೆ. ನ್ಯಾಯಾಧೀಶೆಯಾಗಬೇಕೆಂಬುದು ನನ್ನ ಆಸೆ ಎಂದು ಹೇಳಿದ್ದಾರೆ.
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
More Stories
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ