December 27, 2024

Newsnap Kannada

The World at your finger tips!

rajanna

ಮೀಸಲಾತಿ ಕೇಳೋ‌ ಸ್ವಾಮೀಜಿಗಳನ್ನೇ ಸಿಎಂ, ಸಚಿವರಾಗಿ ಮಾಡಿ -ರಾಜಣ್ಣ ಕಿಡಿ

Spread the love

ರಾಜ್ಯದ ಎಲ್ಲಾ ಸ್ವಾಮೀಜಿಗಳನ್ನು ಸೇರಿಸಿ ಅವರುಗಳನ್ನೇ‌ ಸಿಎಂ‌ , ಮಂತ್ರಿಯನ್ನಾಗಿ ಮಾಡಿಬಿಡಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ವಾಗ್ದಾಳಿ ಮಾಡಿದರು.

ಮೀಸಲಾತಿ‌ಗಾಗಿ ವಿವಿಧ ಜಾತಿ ಸ್ವಾಮೀಜಿಗಳ ಹೋರಾಟಕ್ಕೆ ಸಂಬಂಧಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಈ ಸಮಸ್ಯೆ ಸರಿಹೋಗಬೇಕು ಅಂದರೆ ಎಲ್ಲಾ ಸ್ವಾಮೀಗಳು ಎಂಎಲ್ಎ, ಸಿಎಂ ಆಗಿಬಿಡಬೇಕು. ಆಗ ಸಮಸ್ಯೆ ಬಗೆಹರಿಯಬಹುದಷ್ಟೇ. ಇಲ್ಲಾ ಅಂದ್ರೆ ಇದು ನೆವರ್ ಎಂಡಿಂಗ್ ಪ್ರಾಬ್ಲಂ ಇದು ಎಂದರು.

ಕುಂಬಾರರು, ಮಡಿವಾಳರು ಈ ಮೀಸಲಾತಿ ಕೇಳಿದರೆ ಪರವಾಗಿಲ್ಲ. ತಳಸಮುದಾಯದ ಶೋಷಿತರು ಮೀಸಲಾತಿ ಕೇಳೋದ್ರಲ್ಲಿ ಅರ್ಥ‌ ಇದೆ. ಲಿಂಗಾಯತರು 2-ಎಗೆ ಬಂದರೆ ಕುರುಬರೆಲ್ಲ ಸತ್ತುಹೋಗುತ್ತಾರೆ. 2-ಎನಲ್ಲಿ ಹೆಚ್ಚು ಫಲಾನುಭವಿಗಳು ಕುರುಬರೇ‌ ಇರೋದು. ಅವರೇನಾದ್ರೂ 2-ಎಗೆ ಬಂದರೆ ಕುರುಬರನ್ನು ಸಾಯಿಸಿ ಬಿಡುತ್ತಾರೆ ಅಂತಾ ಆರೋಪಿಸಿದರು.

ಅದೇ ರೀತಿ ಕುರುಬರಿಗೆ ಎಸ್ಟಿ ಮೀಸಲಾತಿ ಕೊಟ್ರೆ ನಿಜವಾಗಿಯೂ ಎಸ್ ಟಿ ಗಳಾದವರ ಕಥೆ ಮುಗಿಯಿತು ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!