ವರಕೋಡು ಶಾಲೆಯ ಸುಂದರ ಪರಿಸರಿದಲ್ಲಿ ಕೊರೋನಾ ವಾರಿಯಸ್೯ ಗೆ ಸನ್ಮಾನ

Team Newsnap
2 Min Read

ಮಕ್ಕಳಿಗೆ ಪಾಠ ಹೇಳಿಕೊಡುವುದರ ಜೊತೆಗೆ, ಮಕ್ಕಳಿಗೆ ಪರಿಸರದ ಮಹತ್ವ, ಪರಿಸರದಿಂದ ಆಗುವ ಬಗ್ಗೆ ಲಾಭಗಳನ್ನು ವಾಸ್ತವವಾಗಿ ‌ತಿಳಿಸಿಕೊಡುವ ಮೈಸೂರು ಸಮೀಪದ ವರಕೊಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಧಕ ವರ್ಗ ಹಾಗೂ ಎಸ್ ಡಿ ಎಂ ಸಿ ಸದಸ್ಯ ಸೇವೆ ಸದಾ ಸ್ಮರಣೀಯ. ‌

ಮಕ್ಕಳು, ಪ್ರಾಣಿಗಳನ್ನು ದತ್ತು ಪಡೆದು ಕೊಳ್ಳುವುದನ್ಮು ನೋಡಿದ್ದೇವೆ ಆದರ ಇದೊಂದು ಶಾಲೆಯಲ್ಲಿ 150 ಮಕ್ಕಳ ಜೊತೆಗೆ ಪರಿಸರ ಪ್ರೇಮಿಗಳು ಶಾಲಾ ಆವರಣದಲ್ಲಿನ‌ 120 ಮರ ಗಳನ್ನು ಮಗುವಿನಂತೆ ನೋಡಿಕೊಂಡು ಪಾಲನೆ, ಪೋಷಣೆ ಮಾಡುತ್ತಾರೆ.

ಇದೊಂದು ಸುಂದರ ಶಾಲೆ. ಶಾಲೆಯ ಸುತ್ತಲೂ ಹಸಿರು ವನ. ಕಣ್ಮನ ತಣಿಸುತ್ತದೆ. ಕಾರಂಜಿ ವನದಲ್ಲಿ ಇರೋ ಬಾಳೆ,ಅಡಿಕೆ,ತೆಂಗು,ಸಪೋಟ ,ಕಿತ್ತಳೆ ,ನಿಂಬೆಹಣ್ಣಿನ ಗಿಡ, ಅತ್ತಿ ಸೇರಿದಂತೆ ಇತರೆ ಗಿಡಗಳು ಶಾಲೆಗೆ ಶೋಭಾಯಮಾನವಾಗಿದೆ.‌

ಕೊರೋನಾ ವಾರಿಯಸ್ ೯ ಗೆ ಸನ್ಮಾನ‌:

ಸಹಿಪ್ರಾಶಾಲೆ ವರಕೋಡು ಶಾಲೆಯ ಸುಂದರ ವಾತಾವರಣದಲ್ಲಿ ಎಸ್.ಡಿ.ಎಂ.ಸಿ ತರಬೇತಿ ಕಾರ್ಯಕ್ರಮ ಹಾಗೂ ಕೊರೋನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು.

ವಿಡಿಯೋ ಜರ್ನಲಿಸ್ಟ್ ಆರ್. ಮಧುಸೂದನ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಹಾಗೂ ಕೊರೋನಾ ವಾರಿಯರ್ಸ್ ಗೆ ಗಿಡಗಳನ್ನು ಅವರ ಹೆಸರಿನಲ್ಲಿ ದತ್ತು ನೀಡಿ ಗಿಡಕ್ಕೆ ಗೊಬ್ಬರ ನೀರು ಉಣಿಸಿ ಪರಿಸರ ಸಂರಕ್ಷಣೆ ಮಾಡುವಂತೆ ಶಾಲೆಯ ಮುಖ್ಯ ಶಿಕ್ಷಕ ಆರ್.ನರಸಿಂಹಮೂರ್ತಿ ಅರಿವು ಮೂಡಿಸಿದರು.

ಸಮಾಜ ಸೇವಕ ರಾಜಾರಾಂ, ಹಿರಿಯ ಕ್ಯಾಮರ ಮೆನ್ ಆರ್.ಮಧುಸೂದನ್, ತಿ.ನರಸೀಪುರ ಠಾಣೆ ಉಪ ನಿರೀಕ್ಷಕ ಮಂಜು,ಪೋಲಿಸ್ ರವಿ ಕುಮಾರ್ , ಪತ್ರಕರ್ತೆ ನಂದಿನಿ ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಮುಖ್ಯ ಶಿಕ್ಷಕಿ ಪದ್ಮ,ಆಶಾ ಕಾರ್ಯಕರ್ತ ರಾದ ಸುನಂದ, ನೇತ್ರಾವತಿ ರವರಿಗೆ ಕೊರೊನಾ ವಾರಿಯರ್ಸ್ ಎಂದು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕಿ ಮಾರ್ಗರೇಟ್, ಸಹಾಯಕ ಶಿಕ್ಷಕ ಕೆ.ಜೆ.ಕುಮಾರ್ ,ಎಸ್.ಡಿ.ಎಂ ಪಿ ಅಧ್ಯಕ್ಷ ಎಸ್.ಸೋಮಣ್ಣ,ದೀಪು ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಗಿಡ ದತ್ತು ಪಡೆದು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಜವಾಬ್ದಾರಿ ಹೆಚ್ಚಿಸಿ ಇತರೆ ಶಾಲೆಗಳಿಗೆ ಮಾದರಿಯಾಗಿರುವುದು ವರಕೂಡು ಸರ್ಕಾರಿ ಶಾಲೆ.

Share This Article
Leave a comment