December 25, 2024

Newsnap Kannada

The World at your finger tips!

03da8ecc 18b3 456b a0ac ea95ec01bcd9

ರೈತ ನಾಯಕನ ಹತ್ಯೆಗೆ ಖಾಲಿಸ್ತಾನಿ ಉಗ್ರರ ಸಂಚು

Spread the love

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಓರ್ವ ರೈತ ನಾಯಕನ ಹತ್ಯೆಗೆ ಖಾಲಿಸ್ತಾನಿ ಉಗ್ರರು ಸಂಚು ರೂಪಿಸಿರುವ ಸ್ಫೋಟಕ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ಬೆಲ್ಜಿಯಂ ಮತ್ತು ಇಂಗ್ಲೆಂಡ್‍ನ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಂಚು ರೂಪಿಸುತ್ತಿದೆ ಎಂಬ ಸ್ಪೋಟಕ ಮಾಹಿತಿಯನ್ನು ಗುಪ್ತಚರ ವಿಭಾಗ ಸರ್ಕಾರಕ್ಕೆ ತಿಳಿಸಿದೆ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿಂಘುಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತ ನಾಯಕರನ್ನು ಮೇಲೆ ದಾಳಿ ಮಾಡಲು ಇಂಗ್ಲೆಂಡ್ ಮತ್ತು ಬೆಲ್ಜಿಯಂನ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಮಾಹಿತಿ ಕಲೆಹಾಕಿ ವ್ಯವಸ್ಥಿತ ಸಂಚನ್ನು ಮಾಡುತ್ತಿದೆ ಎಂದು ಹೇಳಲಾಗಿದೆ.

ಭಾರತ ನೆರೆಯ ರಾಷ್ಟ್ರಗಳಾದ ಕೆನಡಾ, ಇಂಗ್ಲೆಂಡ್, ಬೆಲ್ಜಿಯಂ ಮತ್ತು ಪಾಕಿಸ್ತಾನದ ಹಲವು ಸಂಘಟನೆಗಳು ಖಾಲಿಸ್ತಾನದ ಭಯೋತ್ಪಾದಕರಿಗೆ ಬೆಂಬಲ ಸೂಚಿಸುತ್ತಿದೆ ಎಂದು ಗೊತ್ತಾಗಿದೆ.

ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಯತ್ನ ಮಾಡಲು ಅಂತರಾಷ್ಟ್ರಿಯ ಷಡ್ಯತಂತ್ರದ ಬಗ್ಗೆ ಸ್ಫೋಟಕ ವಿಚಾರ ಪ್ರಕಟವಾಗಿದೆ. ಇದರಲ್ಲಿ ಪಾಕಿಸ್ತಾನದ ಕೈವಾಡವೇ ಹೆಚ್ಚಿದೆ ಎನ್ನುವುದು ಬೆಳಕಿಗೆ ಬಂದಿದೆ.

Copyright © All rights reserved Newsnap | Newsever by AF themes.
error: Content is protected !!