February 22, 2026

Newsnap Kannada

The World at your finger tips!

shetty

ಫುಟ್ಬಾಲ್ ಆಟಗಾರರ ಹೆಸರಿನಲ್ಲಿ 60 ಕಾರು ಬಾಡಿಗೆ : ಐಟಿ ಮಾಸ್ಟರ್ ಪ್ಲಾನ್!

Spread the love
  • ಮಂಗಳೂರಲ್ಲಿ ಉದ್ಯಮಿಗಳಿಗೆ ಐಟಿ ಶಾಕ್
  • ದಾಳಿ ವೇಳೆ ಮಾಲೀಕರೊಬ್ಬರ ತಂದೆ ಆರೋಗ್ಯದಲ್ಲಿ ಏರುಪೇರು
  • 5 ಕೋಟಿ ಹಣ ಪತ್ತೆಯ ಬಗ್ಗೆ ಮಾಹಿತ
  • ಎ ಜೆ ಶೆಟ್ಟಿ ಆಸ್ಪತ್ರೆಯ ಮೇಲೂ ದಾಳಿ

ಮಂಗಳೂರಿನಲ್ಲಿ ಬುಧವಾರ ವಿವಿಧ ಉದ್ಯಮಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು .

ajh

ದಾಳಿಗೂ ಮುನ್ನ ಅಧಿಕಾರಿಗಳು ಮಾಸ್ಟರ್ ಪ್ಲಾನ್ ಮಾಡಿ ಮಂಗವಾರ ಸಂಜೆ 60 ಕಾರುಗಳನ್ನು ಅಧಿಕಾರಿಗಳು ಬಾಡಿಗೆಗೆ ಪಡೆದಿದ್ದರು.

ಬಾಡಿಗೆ ಪಡೆಯುವ ವೇಳೆ ಕೇರಳಕ್ಕೆ ಹೋಗಬೇಕು. ಇಂಟರ್ ಸ್ಟೇಟ್ ಫುಟ್ಬಾಲ್ ಚಾಂಪಿಯನ್ ಶಿಪ್ ಇದೆ. ಕಾರಿನಲ್ಲಿ ಫುಟ್ಬಾಲ್ ಆಟಗಾರರು ಬರುತ್ತಾರೆ ಅಂತ ಅಧಿಕಾರಿಗಳು ಬಾಡಿಗೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ ನಿನ್ನೆ ಸಂಜೆ ಕಾರುಗಳಿಗೆ ಸಿಬ್ಬಂದಿ ‘ಫುಟ್ಬಾಲ್’ ನ ಸ್ಟಿಕರ್ ಅಂಟಿಸಿದ್ದರು. ಈ ಮೂಲಕ ಆಪರೇಷನ್ ಗೌಪ್ಯವಾಗಿರಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮಂಗಳೂರಲ್ಲಿ ಉದ್ಯಮಿಗಳಿಗೆ ಐಟಿ ಶಾಕ್ ನೀಡಿರುವ ಅಧಿಕಾರಿಗಳ ದಾಳಿ ವೇಳೆ ಮಾಲೀಕರೊಬ್ಬರ ತಂದೆಯ ಆರೋಗ್ಯದಲ್ಲಿ ಏರುಪೇರು ಆಗಿತ್ತು ಎಂದು ಗೊತ್ತಾಗಿದೆ. ಅಲ್ಲದೆ 5 ಕೋಟಿ ಹಣ ಪತ್ತೆಯಾಗಿದೆ ಎಂದು ತಿಳಿದಿದೆ.

error: Content is protected !!