ಬ್ಯಾಂಕ್ ಗಳಲ್ಲಿ ಮತ್ತೆ ಸೇವಾ ಶುಲ್ಕ ಕಡಿತ – ಗ್ರಾಹಕರಿಗೆ ಬರೆ

Team Newsnap
1 Min Read

ಬ್ಯಾಂಕುಗಳು ಗ್ರಾಹಕರಿಗೆ ಸದ್ದಿಲ್ಲದೇ ಶಾಕ್ ಮುಂದಾಗಿವೆ. ಇನ್ನು ಮುಂದೆ ಮತ್ತೆ ಬ್ಯಾಂಕುಗಳಲ್ಲಿ ನಿಗದಿಗಿಂತ ಹೆಚ್ಚಿನ ವ್ಯವಹಾರ ನಡೆಸಿದಲ್ಲಿ ಸೇವಾ ಶುಲ್ಕ ಪಾವತಿಸಬೇಕು.

ಕಳೆದ ವರ್ಷ ಕೊರೋನಾ ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ನಿರ್ಬಂಧಗಳನ್ನು ತೆರವುಗೊಳಿಸ ಲಾಗಿತ್ತು. ಈಗ ಮತ್ತೆ ಸದ್ದಿಲ್ಲದೆ ಸೇವಾ ಶುಲ್ಕ ವಿಧಿಸಲಾಗುತ್ತಿದೆ.

ಕೆಲವು ಬ್ಯಾಂಕುಗಳಲ್ಲಿ ನಿಗದಿಗಿಂತ ಹೆಚ್ಚಿನ ವಹಿವಾಟು ನಡೆಸುವ ಇಲ್ಲವೇ ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಶುಲ್ಕ ಕಡಿತವಾಗುತ್ತಿದೆ. ಕನಿಷ್ಠ ಬ್ಯಾಲೆನ್ಸ್ ವಿಚಾರದಲ್ಲಿಯೂ ಶುಲ್ಕ ಕಡಿತ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಕೆಲವು ಬ್ಯಾಂಕುಗಳು ಎಟಿಎಂಗಳಲ್ಲಿ ಉಚಿತವಾಗಿ ಹಣ ವಿತ್ ಡ್ರಾ ಮಾಡಲು ಅವಕಾಶ ನೀಡಿವೆ. ನಿಗದಿಗಿಂತ ಹೆಚ್ಚಿನ ಸಲ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ರೆ ಶುಲ್ಕ ಪಾವತಿಸಬೇಕು.5 ಸಾವಿರಕ್ಕೆ ಸುಮಾರು 20 ರು ಶುಲ್ಕ ಕಡಿತವಾಗುತ್ತಿದೆ ಎಂದು ಹೇಳಲಾಗಿದೆ.

ಜನಸಾಮಾನ್ಯರು ಸಾಮಾನ್ಯವಾಗಿ 100, 200, 500 ರೂ. ವಿತ್ ಡ್ರಾ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಗ್ರಾಹಕರಿಗೆ ಎಟಿಎಂನಲ್ಲಿ ನಮೂದಿಸಿದ ಹಣ ಬಂದರೂ ಮೆಸೇಜ್ ನಲ್ಲಿ ಹೆಚ್ಚುವರಿ ಹಣ ಕಡಿತವಾಗಿರುವುದನ್ನು ಕಂಡು ಕೆಲವು ಗ್ರಾಹಕರಿಗೆ ಶಾಕ್ ಆಗಿದೆ
ಒಟ್ಟಾರೆ ನಿಮ್ಮ ಬ್ಯಾಂಕ್ ಖಾತೆ ವ್ಯವಹಾರ ವನ್ನು ಆಗಾಗ್ಗೆ ನೋಡಿಕೊಳ್ಳಿ. ಇಲ್ಲದೆ ಹೋದರೆ ನಿಮ್ಮನ್ನು ಯಾಮಾರಿಸಲು ಬ್ಯಾಂಕ್ ನವರು ಕಾದಿದ್ದಾರೆ.‌

Share This Article
Leave a comment