February 22, 2026

Newsnap Kannada

The World at your finger tips!

bupal

ಭೂಪಾಲ್ ಬಳಿ ಬಸ್ ಕಾಲುವೆಗೆ ಉರುಳಿ 32 ಮಂದಿ ಜಲ ಸಮಾಧಿ

Spread the love

60 ಮಂದಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದ ಬಸ್ ವೊಂದು ಸೇತುವೆಯಿಂದ ಕಾಲುವೆಗೆ ಉರುಳಿ 32 ಮಂದಿ ಮೃತಪಟ್ಟ ಘಟನೆ ಮಧ್ಯ ಪ್ರದೇಶ ಸಿಧಿ ಜಿಲ್ಲೆಯ ಗ್ರಾಮವೊಂದರ ಬಳಿ ಇಂದು ಜರುಗಿದೆ.

ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿ ಸುಮಾರು 60 ಪ್ರಯಾಣಿಕರು ಇದ್ದರು. ಇನ್ನೂ ಕೆಲವರು ನೀರು ಪಾಲಾದ ಶಂಕೆಯೂ ಇದೆ.

ಅಪಘಾತ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸ ಬೇಕಾದ ಪ್ರಮುಖ ಕಾರ್ಯಕ್ರಮ ವೊಂದನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.

ಜಲ ಸಮಾಧಿಯಾದವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ :

ಕಾಲುವೆ ಬಳಿ ರಕ್ಷಣಾ ಕಾರ್ಯ ಈಗಾಗಲೇ ನಡೆಯುತ್ತಿದೆ. ಇಬ್ಬರು ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರ ನೀಡಲಾಗುವುದು. ಇಡೀ ರಾಜ್ಯ ವು ಸಂತ್ರಸ್ತರೊದಿಗೆ ನಿಂತಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

error: Content is protected !!