ಸೋಲಿನ ಅವಮಾನದ ಸೇಡು ತೀರಿಸಿಕೊಂಡ ಭಾರತಕ್ಕೆ 2 ನೇ ಟೆಸ್ಟ್ ನಲ್ಲಿ ಭರ್ಜರಿ ಜಯ

Team Newsnap
2 Min Read

ಚೆನ್ನೈ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆದ ಸೋಲಿನ ಅವಮಾನ ಹಾಗೂ ಭಾರೀ ಮುಖ ಭಂಗದ ಸೇಡನ್ನು ಇಂದು ತೀರಿಸಿಕೊಂಡಿದೆ.

ಭಾರತ ಎರಡನೇ ಟೆಸ್ಟ್ ನಲ್ಲಿ ಭರ್ಜರಿ ಜಯ ಗಳಿಸುವುದರ ಮೂಲಕ ಇಂಗ್ಲೆಂಡ್ ಗೆ ಸೋಲಿನ ರುಚಿ ತೋರಿಸಿದೆ.

ಚೆನ್ನೈನಲ್ಲೇ ನಡೆದ ಎರಡನೇ ಪಂದ್ಯದಲ್ಲಿ ಭಾರತ 317 ರನ್​ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ.

ಗೆಲ್ಲಲು 482 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡದ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 164 ರನ್​ಗೆ ಅಂತ್ಯಗೊಂಡಿತು.

ಭಾರತೀಯ ಸ್ಪಿನ್ನರ್​ಗಳ ಕೈಚಳಕಕ್ಕೆ ಆಂಗ್ಲರು ಬೇಸ್ತುಬಿದ್ದು ಸೋಲು ಒಪ್ಪಿಕೊಂಡರು. ಈ ಗೆಲುವಿನ ಮೂಲಕ ಭಾರತ ಈ ನಾಲ್ಕು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲ ಸಾಧಿಸಿದೆ. ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ.

ನಿನ್ನೆ ಮೂರನೇ ದಿನದ ಮುಕ್ತಾಯದ ಆಟಕ್ಕೆ ಇಂಗ್ಲೆಂಡ್ ತಂಡ ತನ್ನ ಎರಡನೇ ಇನಿಂಗ್ಸಲ್ಲಿ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದ್ದಾಗಲೇ ಸೋಲು ಗ್ಯಾರೆಂಟಿ ಆಗಿತ್ತು.

ನಾಲ್ಕನೇ ದಿನವಾದ ಇಂದು ನಿರೀಕ್ಷೆ ಮೀರಿ ಇಂಗ್ಲೆಂಡ್ ತಂಡದ ಪತನ ಆಯಿತು. 126 ರನ್ ಆಗುವಷ್ಟರಲ್ಲಿ 9 ವಿಕೆಟ್​ಗಳು ಪತನವಾಗಿದ್ದವು. ಆದರೆ, ಅಂತ್ಯದಲ್ಲಿ ಮೊಯೀನ್ ಅಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಸೋಲನ್ನು ತುಸು ವಿಳಂಬಗೊಳಿಸಿದರು.

ಮಾಜಿ ಆರ್​ಸಿಬಿ ಆಟಗಾರನಾದ ಮೊಯೀನ್ ಅಲಿ ಕೇವಲ 18 ಎಸೆತದಲ್ಲಿ 43 ರನ್ ಕಲೆ ಹಾಕಿದರು.
5 ಸಿಕ್ಸರ್ 3 ಬೌಂಡರಿ ಭಾರಿಸಿದ ಅಲಿ ಈ ಪಿಚ್ ಬ್ಯಾಟ್ಸ್‌ಮನ್ ಗಳ ಸ್ವರ್ಗ ಎಂಬಂತೆ ಬ್ಯಾಟಿಂಗ್ ನಡೆಸಿದ್ದು ವಿಶೇಷ.

ಸ್ಕೋರ್ ವಿವರ:

  • ಭಾರತ ಮೊದಲ ಇನ್ನಿಂಗ್ಸ್ 95.5 ಓವರ್ ಗೆ 329/10
  • ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 59.5 ಓವರ್ ಗೆ 134/1೦

*ಭಾರತ ಎರಡನೇ ಇನ್ನಿಂಗ್ಸ್ 85.5 ಓವರ್ 286/10

  • ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 54.2 ಓವರ್ 164/10

ಬ್ಯಾಟಿಂಗ್ ಪ್ರದರ್ಶನ :

  • ಜೋ ರೂಟ್ 33, ಡ್ಯಾನ್ ಲಾರೆನ್ಸ್ 26, ಮೊಯೀನ್ ಅಲಿ 43, ರೋರಿ ಬರ್ನ್ಸ್ 25 ರನ್

ಬೌಲಿಂಗ್ ಪ್ರದರ್ಶನ

  • ಆರ್ ಅಶ್ವಿನ್ 53/3, ಅಕ್ಷರ್ ಪಟೇಲ್ 60/5, ಕುಲದೀಪ್ ಯಾದವ್ 25/2)
Share This Article
Leave a comment