December 26, 2024

Newsnap Kannada

The World at your finger tips!

Suresh Kumar

ಬೆಂಗಳೂರು ಬಿಟ್ಟು ರಾಜ್ಯಾದ್ಯಂತ ಫೆ.22 ರಿಂದ 6 ರಿಂದ 8ನೇ ತರಗತಿ ಆರಂಭ

Spread the love

*ಬೆಂಗಳೂರು, ಕೇರಳ ಗಡಿಯಲ್ಲಿ 8ನೇ ತರಗತಿ ಮಾತ್ರ ಆರಂಭ

*ತರಗತಿಯಲ್ಲಿ ಹಾಜರಾತಿ ಕಡ್ಡಾಯವಲ್ಲ

ಬೆಂಗಳೂರು, ಕೇರಳ ಗಡಿಯಲ್ಲಿರುವ ಶಾಲೆಗಳನ್ನು ಹೊರತುಪಡಿಸಿ ಹೊರತುಪಡಿಸಿ ಫೆ.22 ರಿಂದ ರಾಜ್ಯಾದ್ಯಂತ 6 ರಿಂದ 8ನೇ ತರಗತಿಗಳು ಆರಂಭ ವಾಗಲಿವೆ.

ರಾಜ್ಯ ಸರ್ಕಾರದ ನಿರ್ಧಾರವನ್ನು ಶಾಲೆ ಆರಂಭದ ಬಗ್ಗೆ ಇಂದು ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, 6 ರಿಂದ 8ನೇ ತರಗತಿ ವಿದ್ಯಾಗಮ ಬದಲು ಪೂರ್ಣ ಪ್ರಮಾಣದ ಶಾಲೆಗಳನ್ನು ತೆರೆಯುತ್ತೇವೆ. ಶಾಲಾ ಪ್ರಾರಂಭದ ಬಗ್ಗೆ 5ನೇ ಸಭೆ ಇಂದು ನಡೆದಿದೆ ಎಂದರು.

ಸರ್ಕಾರದ ಪ್ರಮುಖ ನಿರ್ಧಾರ ಪ್ರಕಟ‌:

  • ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗದಲ್ಲಿ 6 ಮತ್ತು 7ನೇ ತರಗತಿಗಳು ಇರುವುದಿಲ್ಲ.
  • ಬೆಂಗಳೂರು ಮತ್ತು ಕೇರಳದಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿ ಇರುವ ಕಾರಣ ಕೇವಲ 8ನೇ ತರಗತಿ ತೆರೆಯಲು ಅನುಮತಿ ನೀಡಲಾಗಿದೆ‌.
  • ಕೇರಳ ಭಾಗದಿಂದ ಬರುವ ವಿದ್ಯಾರ್ಥಿಗಳು ಕೊರೊನಾ ಟೆಸ್ಟ್ ರಿಪೋರ್ಟ್ ಮಾಡುವುದು ಕಡ್ಡಾಯ. ಈ ಬಾರಿಯೂ ಶಾಲೆಗಳಿಗೆ ಹಾಜರಾತಿ ಕಡ್ಡಾಯ ಅಲ್ಲ.
  • ಶಾಲೆಗಳಲ್ಲಿ ಕೊರೋನಾ ನಿಯಮ ಪಾಲನೆ ಆಗುವ ಸಂಬಂಧ ನಾಳೆ ಡಿಸಿಗಳ ಜೊತೆ ಸಭೆ
  • 24 ಅಥವಾ 25 ಮತ್ತೆ ತಜ್ಞರ ಸಮಿತಿ ಜೊತೆ ಸಭೆ ಮಾಡುತ್ತೇವೆ. 1-5 ನೇ ತರಗತಿ ವಿದ್ಯಾಗಮ ಪ್ರಾರಂಭ ಮಾಡುವ ಕುರಿತಾಗಿ ಸಭೆಯಲ್ಲಿ ಅಂತಿಮ ನಿರ್ಧಾರ.
  • ಸದ್ಯಕ್ಕೆ 1-5 ನೇ ತರಗತಿಗಳ ಪ್ರಾರಂಭ ಇಲ್ಲ ಮತ್ತು ವಿದ್ಯಾಗಮವೂ ಇಲ್ಲ
Copyright © All rights reserved Newsnap | Newsever by AF themes.
error: Content is protected !!