February 22, 2026

Newsnap Kannada

The World at your finger tips!

sucide

ಮಗಳ ನಿಶ್ಚಿತಾರ್ಥ ರದ್ದು- ಮನನೊಂದ ಅಪ್ಪ, ಅಮ್ಮ ಆತ್ಮಹತ್ಯೆ

Spread the love

ಮಗಳಿಗೆ ನಿಶ್ಚಯ ಮಾಡಿದ್ದ ನಿಶ್ಚಿತಾರ್ಥ ರದ್ದಾದ ಕಾರಣಕ್ಕಾಗಿ ಮನನೊಂದ ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಹಾಸನದಲ್ಲಿ ಜರುಗಿದೆ.

ಹಾಸನ ಜಿಲ್ಲೆ ಆಲೂರು ತಾಲೂಕಿನ ಬನ್ನೂರುಪುರ ಗ್ರಾಮದ ಪುಟ್ಟೆಗೌಡ ಮತ್ತು ಶಾಂತಮ್ಮ ಆತ್ಮಹತ್ಯೆ ಮಾಡಿಕೊಂಡವರು.

ಕೆಲ ದಿನಗಳ ಹಿಂದೆ ಮಗಳ ಮದುವೆ ನಿಶ್ಚಿತಾರ್ಥ ನಿಗಧಿಯಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ನಿಶ್ಚಿತಾರ್ಥ ರದ್ದಾಯಿತು. ಇದರಿಂದ ಮನನೊಂದ ಆ ಯುವತಿಯ ತಂದೆ-ತಾಯಿ ಇಬ್ಬರೂ ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥ ರದ್ದಾಗಲು ಏನು ಕಾರಣ ಎಂಬುದು ನಿರ್ದಿಷ್ಟವಾಗಿ ಗೊತ್ತಾಗಿಲ್ಲ. ಆಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!