November 15, 2024

Newsnap Kannada

The World at your finger tips!

lpg

image source : google

ಇಂದು ಮಧ್ಯ ರಾತ್ರಿಯಿಂದಲೇ LPG ಸಿಲಿಂಡರ್ ದರ ಮತ್ತೆ 50 ರು ಏರಿಕೆ

Spread the love

ಇಂದು ಮಧ್ಯ ರಾತ್ರಿಯಿಂದಲೇ
ಎಲ್ ಪಿ ಜಿ ಗೃಹ ಬಳಕೆಯ ಅನಿಲ ಸಿಲಿಂಡರ್ (14.2 ಕೆ.ಜಿ) ಬೆಲೆ ಮತ್ತೆ ಹೆಚ್ಚಳವಾಗಲಿದೆ.

ಪ್ರತಿ ಸಿಲಿಂಡರ್ʼಗೆ 50 ರು ಏರಿಕೆ ಮಾಡಲಾಗಿದೆ. ಇಂದು ಮಧ್ಯ ರಾತ್ರಿ 12 ಗಂಟೆಯಿಂದ ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 769 ರೂಪಾಯಿ ಆಗಲಿದೆ.

ಎಲ್ ಪಿಜಿ ಗ್ಯಾಸ್ ಸಿಲಿಂಡರ್ʼಗಳ ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧರಿಸುತ್ತವೆ ಮತ್ತು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲ್ಪಡುತ್ತವೆ.

ಅಂತಾರಾಷ್ಟ್ರೀಯ ಇಂಧನ ದರಗಳು ಮತ್ತು ಯುಎಸ್ ಡಾಲರ್-ರೂಪಾಯಿ ವಿನಿಮಯ ದರಗಳನ್ನು ಅವಲಂಬಿಸಿ, ಬೆಲೆಗಳು ಏರಬಹುದು ಅಥವಾ ಇಳಿಕೆಯಾಗಬಹುದು.

ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ʼಗಳ ಮಾರಾಟದ ಮೇಲೆ ಕೇಂದ್ರ ಸರ್ಕಾರ ಸದ್ಯ ಸಬ್ಸಿಡಿ ನೀಡುತ್ತಿದೆ. ಸಿಲಿಂಡರ್ ಖರೀದಿಸಿದ ನಂತರ ಸಬ್ಸಿಡಿ ಮೊತ್ತವನ್ನ ನೇರವಾಗಿ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಎಲ್ ಪಿಜಿ ಬೆಲೆ ಏರಿಕೆ ಭಾರತದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಲು ಸಜ್ಜಾಗಿದೆ.
ತೈಲ ಬೆಲೆ ಏರಿಕೆ ಯಿಂದಾಗಿ ದೇಶದ ಮೂರನೇ ಅತಿದೊಡ್ಡ ತೈಲ ಆಮದುದಾರ ಭಾರತದಲ್ಲಿ ಹಣದುಬ್ಬರವನ್ನ ಹೆಚ್ಚಿಸಲಿದೆ.

Copyright © All rights reserved Newsnap | Newsever by AF themes.
error: Content is protected !!