December 27, 2024

Newsnap Kannada

The World at your finger tips!

3036d846 97ef 4e66 b308 6f743df1cdf4

ಮಕ್ಕಳು ವಿದ್ಯೆಯ ಜೊತೆ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ ಮುಖ್ಯ

Spread the love

11ನೇ ಮಕ್ಕಳ ರಾಷ್ಟ್ರೀಯ ಸಾಂಸ್ಕøತಿಕ ಸಮ್ಮೇಳನದ ಸಮ್ಮೇಳನಾಧ್ಯಕ್ಷೀಯ ಅನನ್ಯ ಅಭಿಮತ

ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕತಿಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿವೆ ಎಂದು ಸಮ್ಮೇಳನಾಧ್ಯಕ್ಷೆ ಕು. ಎಂ.ಎಸ್. ಅನನ್ಯ ಕಂಠಿ ತಿಳಿಸಿದರು.

45a63ccf 722f 4775 923c bf603f03dace

ಮಂಡ್ಯ ದ ಗಾಂಧಿ ಭವನದಲ್ಲಿ ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ,
ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ, ಕನ್ನಡ ಸಂಸ್ಕೃತಿ ಇಲಾಖೆ
ವತಿಯಿಂದ ನಡೆದ 11ನೇ ಮಕ್ಕಳ ರಾಷ್ಟ್ರೀಯ ಸಾಂಸ್ಕøತಿಕ
ಸಮ್ಮೇಳನದ ಸಮ್ಮೇಳನಾಧ್ಯಕ್ಷೀಯ ಮಾತನಾಡಿದ ಕು. ಅನನ್ಯ
ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ ಮಹಾರಾಜರ ಕಾಲದಿಂದಲೂ
ನಡೆದುಕೊಂಡು ಬಂದಿವೆ. ಇವು ನಿನ್ನೆ ಮೊನ್ನೆಯದ್ದಲ್ಲ. ಕೇವಲ ನೃತ್ಯ, ಜನಪದ ಗೀತೆಗಳಷ್ಟೇ ಅಲ್ಲದೆ, ಪೂಜಾ ಕುಣಿತ, ವೀರಗಾಸೆ, ಬೀಸೋ ಕಲ್ಲಿನ ಪದಗಳು, ಲಾವಣಿಗಳು ಎಲ್ಲವೂ ನಮ್ಮ ಸಾಂಸ್ಕೃತಿಕ ಕಲೆಯನ್ನು ಪ್ರತಿಬಿಂಬಿಸುತ್ತವೆ ಎಂದರು.

ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನ ಎಲ್ಲರಿಗೂ
ಸಂಭ್ರವಾಗಿದೆ. ಡಾ. ಅಂಬರೀಶ್ ಅವರ ಹೆಸರಿನಲ್ಲಿ ವೇದಿಕೆಯ ಹೆಸರು
ಇಟ್ಟು ಕೊಂಡು ನನ್ನನ್ನು ಸಮ್ಮೇಳನಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿ, ಇಂತಹ ಉನ್ನತ ಹುದ್ದೆಯನ್ನು ಅಲಂಕರಿಸಲು ಅವಕಾಶ ಮಾಡಿಕೊಟ್ಟ
ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ‌ ಎಂದರು.

94ee4476 9abd 4451 b7d0 ad981fad331a

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆರೋಗ್ಯ ಮುಖ್ಯ.
ಆರೋಗ್ಯವಂತರಾಗಿ ಇರಬೇಕಾದರೆ ಮಕ್ಕಳು ವಿದ್ಯೆಯ ಜೊತೆಗೆ
ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ
ತೊಡಗಿಸಿಕೊಳ್ಳಬೇಕು. ಪ್ರತಿ ಮಕ್ಕಳೂ ಇಂತಹ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ
ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

ಕಾರ್ಯಕ್ರಮ ದಲ್ಲಿ ಧರ್ಮದರ್ಶಿ ವಿ.ಎಸ್. ಕೃಷ್ಣ, ರಾ.ಮ.ಪ್ರ.ಕೇಂದ್ರದ ರಾಷ್ಟ್ರಾಧ್ಯಕ್ಷೆ ಡಾ. ಸ್ವಾತಿ ಪಿ. ಭಾರದ್ವಾಜ್, ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ನಗರಸಭಾ ಮಾಜಿ
ಸದಸ್ಯ ಕೆ.ಎನ್. ದೀಪಕ್, ಹಿರಿಯ ವಕೀಲ ಮುದ್ದುರಾಜು, ಸಾಹಿತಿಯ ಎಚ್.ಸಿ.
ಚಿಕ್ಕಾಚಾರ್ಯ ಇತರರು ಇದ್ದರು.
ಇದೇ ವೇಳೆ ಮಕ್ಕಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.

Copyright © All rights reserved Newsnap | Newsever by AF themes.
error: Content is protected !!