February 22, 2026

Newsnap Kannada

The World at your finger tips!

monkey 2

ಮಲಗಿದ್ದ ಮಗು-ಹೊತ್ತೊಯ್ದ ಮಂಗ: ಹಸುಗೂಸಿನ ಪ್ರಾಣಕ್ಕೆ ಕುತ್ತು

Spread the love

ಮಂಗವೊಂದು ಮನೆಯೊಳಗೆ ಮಲಗಿದ್ದ 8 ತಿಂಗಳ ಮಗುವನ್ನು ಎಳೆದೊಯ್ದ, ಮನೆ ಮೇಲಿಂದ ಕೈ ಬಿಟ್ಟ‌ ಪರಿಣಾಮ ಮಗು ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ಭಾನುವಾರ ಜರುಗಿದೆ.

ಇಷ್ಟು ದಿನ ಮನೆಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮಂಗಗಳು, ಈಗ ಮಂಗವೊಂದು ಹಸುಕೂಸನ್ನು ಎತ್ತಿಕೊಂಡು ಹೋಗಿ ಪ್ರಾಣಕ್ಕೆ ಕುತ್ತು ತಂದಿದೆ.

ಮೇಲ್ಚಾವಣಿ ತೆರೆದು ಮನೆಯೊಳಕ್ಕೆ ನುಗ್ಗಿಬಂದಿರುವ ಮಂಗ ಮಲಗಿರುವ ಮಗುವನ್ನು ಎತ್ತಿಕೊಂಡು ಹೋಗಿದೆ. ಆಗ ಮಗು ಅಳಲು ಪ್ರಾರಂಭಿಸಿದೆ. ಅಳುವಿನ ಶಬ್ಧವನ್ನು ಕೇಳಿ ತಾಯಿ ಓಡಿಬಂದಿದ್ದಾರೆ.

monkey 1

ಆದರೆ ಆ ವೇಳೆಗೆ ಮಗುವನ್ನು ಎತ್ತಿಕೊಂಡು ಮಂಗ ಪರಾರಿಯಾಗಿತ್ತು.
ತಾಯಿ ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ಅಕ್ಕಪಕ್ಕದವರು ಬಂದು ಜೋರಾಗಿ ಗಲಾಟೆ ಮಾಡಿದ್ದಾರೆ.

ಈ ವೇಳೆ ಭಯಗೊಂಡಿರುವ ಮಂಗ ಮಗುವನ್ನು ಮನೆಯ ಛಾವಣೆ ಯಿಂದಲೇ ಎಸೆದು ಹೋಗಿದೆ. ಮಗುವನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು.

error: Content is protected !!