January 12, 2025

Newsnap Kannada

The World at your finger tips!

rajhuli

ಯಡಿಯೂರಪ್ಪ ನಂತರ ವಿಜಯೇಂದ್ರ ಮುಂದಿನ ರಾಜಾಹುಲಿ-ಸಚಿವ ಎಸ್​​.ಟಿ. ಎಸ್

Spread the love

ಸಿಎಂ ಯಡಿಯೂರಪ್ಪನವರ ನಂತರ ಅವರ ಪುತ್ರ ವಿಜಯೇಂದ್ರ ಮುಂದಿನ‌ ರಾಜಾಹುಲಿ ಎಂದು ಪ್ರಕಟಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ತಮ್ಮ ಪಕ್ಷದ ಪ್ರೇಮ ಹಾಗೂ ಸಿಎಂ ಕುಟುಂಬದ ಮೇಲಿನ ಪ್ರೀತಿಯನ್ನು ಪ್ರದರ್ಶನ ಮಾಡಿದರು.

ಮೈಸೂರಿನಲ್ಲಿ ವೀರಶೈವ ಮಹಾಸಭಾ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಎಸ್‌.ಟಿ. ಸೋಮಶೇಖರ್ ಮಾತನಾಡಿ, ಸಿಎಂ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರರನ್ನು ಹಾಡಿ ಹೊಗಳುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ನಂತರ ಮುಂದಿನ ರಾಜಾಹುಲಿ ಬಿ.ವೈ.ವಿಜಯೇಂದ್ರ ಅವರೇ ಅಂತ ಹೇಳುವ ಮೂಲಕ ಸಿಎಂ ಪುತ್ರನಿಗೆ ವೇದಿಕೆಯಲ್ಲೇ ಮುಂದಿನ ರಾಜಾಹುಲಿ ಎಂಬ ಬಿರುದು ನೀಡಿದರು.

ಅನೇಕ ಪೆಟ್ಟು ತಿಂದವರು ಮುಖ್ಯಮಂತ್ರಿ ಯಡಿಯೂರಪ್ಪ. 40 ವರ್ಷದ ಸುದೀರ್ಘ ಅನುಭವವನ್ನು ಅವರು ಹೊಂದಿದ್ದಾರೆ. ಆ ಅನುಭವದಿಂದಲೇ ಈಗ ಅತ್ಯಂತ ಯಶಸ್ವಿ ಸಿಎಂ ಆಗಿದ್ದಾರೆ. ಅವರ ಮಗ ವಿಜಯೇಂದ್ರ ಸಹ ತಂದೆ ಹಾಕಿಕೊಟ್ಟ ಹಾದಿಯಲ್ಲೇ ನಡೆಯುತ್ತಿದ್ದಾರೆ. ನೂರಾರು ಪೆಟ್ಟು ಬಿದ್ದ ಮೇಲೆಯೇ ಕಲ್ಲೊಂದು ವಿಗ್ರಹವಾಗುವುದು. ಹೀಗಾಗಿ ವಿಜಯೇಂದ್ರಗೂ ಸಹ ಪೆಟ್ಟು ಬೀಳುತ್ತಿವೆ. ಈಗಾಗಲೇ ಶೇ 50  ರಿಂದ 60 ರಷ್ಟು ಉಳಿ ಏಟು ಬಿದ್ದಿವೆ. ಆ ಏಟುಗಳಿಂದ ಮೂರ್ತಿ ಸಿದ್ಧವಾಗುತ್ತಿದೆ. ಎಂದರು.

ಯಡಿಯೂರಪ್ಪ ಅವರ ರೀತಿ ಮುಂದಿನ ದಿನದಲ್ಲಿ ವಿಜಯೇಂದ್ರ ಈ ರಾಜ್ಯದ ರಾಜಹುಲಿ ಆಗಲಿದ್ದಾರೆ ಎಂದು ವೇದಿಕೆಯಲ್ಲೆ ವಿಜಯೇಂದ್ರ‌ರನ್ನು ಹಾಡಿ ಹೊಗಳಿದ ಸಚಿವರು ಸಿಎಂ ಪುತ್ರನನ್ನು ಕೊಂಡಾಡಿದರು.

Copyright © All rights reserved Newsnap | Newsever by AF themes.
error: Content is protected !!