December 25, 2024

Newsnap Kannada

The World at your finger tips!

c731c9bb b398 478a ad38 a16c6ffb2609

ಹಲೋ ಹೇಳಿದ ಜ್ಯೂ. ಚಿರು… ಕಿರು ವಿಡಿಯೋ ರಿಲೀಸ್ ಮಾಡಿದ ಮೇಘನಾ

Spread the love

ಜ್ಯೂನಿಯರ್‌ ಚಿರು ಹೇಗಿದ್ದಾನೆ ಎಂಬ ಅಭಿಮಾನಿಗಳ ಕಾತರದ ಪ್ರಶ್ನೆಗೆ ಪ್ರೇಮಿಗಳ ದಿನ ನಟಿ ಮೇಘನಾ ಸರ್ಜಾ ಫೋಟೋ ಬಿಡುಗಡೆ ಮಾಡಿ , ಮಗುವಿನಿಂದ ಹಲೋ ಎಂದು ಹೇಳುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

ಪ್ರೇಮಿಗಳ ದಿನದಂದೇ ಸ್ಯಾಂಡಲ್‍ವುಡ್ ನಟ ದಿ. ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಿನ ಪುತ್ರ ತಮ್ಮ ಅಭಿಮಾನಿಗಳಿಗೆ ‘ಹಲೋ’ ಹೇಳಿದ್ದಾನೆ.

ನಟಿ ಮೇಘನಾ ಇನ್‌ಸ್ಟಾಗ್ರಾಮನ್‌ನಲ್ಲಿ ಕಿರು ವಿಡಿಯೋ ಅಪ್ಲೋಡ್‌ ಮಾಡಿ ಜ್ಯೂನಿಯರ್‌ ಚಿರು ಮುಖವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

9b7b155e 876a 4d5d 8b1e 6b40f54073f9

2017ರ ಅಕ್ಟೋಬರ್‌ 22 ರಂದು ಚಿರು ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಡಿಯೋದ ಜೊತೆ ಮಗುವಿನ ವಿಡಿಯೋವನ್ನು ಮೇಘನಾ ತೋರಿಸಿದ್ದಾರೆ.

ಜ್ಯೂನಿಯರ್‌ ಚಿರು ಮಲಗಿಕೊಂಡು ನಗುತ್ತಿರುವ ಫೋಟೋ ಮತ್ತು ಚಿರಂಜೀವಿ ಸರ್ಜಾಗೆ ಮಗುವನ್ನು ತೋರಿಸುವ ಫೋಟೋ ಈ ವಿಡಿಯೋದಲ್ಲಿದೆ.
2018ರ ಮೇ 26 ರಂದು ಚಿರು ಮತ್ತು ಮೇಘನಾ ಸರ್ಜಾ ಪ್ರೀತಿಸಿ ಮದುವೆಯಾಗಿದ್ದರು. 2020 ಅಕ್ಟೋಬರ್‌ 22 ರಂದು ಮೇಘನಾ ಸರ್ಜಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.

Copyright © All rights reserved Newsnap | Newsever by AF themes.
error: Content is protected !!