October 18, 2024

Newsnap Kannada

The World at your finger tips!

sidda

ಹಿಂದಿ ಎಂದಿಗೂ ರಾಷ್ಟ್ರ ಭಾಷೆ ಅಲ್ಲ:ಕನ್ನಡವೇ ಸಾರ್ವಭೌಮ – ಮಾಜಿ ಸಿಎಂ ಸಿದ್ದು

Spread the love

ಹಿಂದಿ ಎಂದಿಗೂ ರಾಷ್ಟ್ರ ಭಾಷೆ ಆಗುವುದಿಲ್ಲ ಎಂದು ಮಂಡ್ಯದಲ್ಲಿ ಶನಿವಾರ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು.

ಮಂಡ್ಯ ದ ಕರ್ನಾಟಕ ಸಂಘದಲ್ಲಿ ನಡೆದ ಡಾ.ಹಾಮಾನಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕನ್ನಡವನ್ನು ಪಕ್ಕಕ್ಕೆ ತಳ್ಳಿ ಹಿಂದಿ ಬರಲು ಸಾಧ್ಯವೇ ಇಲ್ಲ.
ಹಿಂದಿ ಉತ್ತರ ಭಾರತದ ಒಂದೈದು ರಾಜ್ಯಗಳಲ್ಲಿ ಮಾತ್ರ ಹಿಂದಿ ಇದೆ.
ಇನ್ನುಳಿದ ರಾಜ್ಯಗಳಲ್ಲಿ ಹಿಂದಿ ಭಾಷೆ ಇಲ್ಲ. ಅದ್ಹೇಗೆ ಈ ದೇಶದಲ್ಲಿ ಹಿಂದಿ ರಾಷ್ಟ್ರ ಭಾಷೆಯಾಗುತ್ತೆ? ಎಂದು ಪ್ರಶ್ನೆ ಮಾಡಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದರು.

ಹಿಂದಿ ಹೇರಿದರೆ ದೇಶದಲ್ಲಿ ರಕ್ತಪಾತ :

ದೇಶದಲ್ಲಿ ಬಲವಂತವಾಗಿ ಹಿಂದಿಯನ್ನು ಹೇರಿಕೆ ಮಾಡಿದ್ರೆ ರಕ್ತಪಾತವಾಗುತ್ತೆ.
ಮಂಡ್ಯದಲ್ಲಿ ತಮ್ಮ ಕನ್ನಡ ಭಾಷಾಭಿಮಾನವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಿಚ್ಚಿ ಇಟ್ಟರು.

ಡಾ ಹಾಮಾನ ಪ್ರಶಸ್ತಿ ಪ್ರದಾನ

hmn

ಮಂಡ್ಯದ ಕರ್ನಾಟಕ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ಸಮಾಜವಾದಿ ಚಿಂತಕರಾದ ಕೋಣಂದೂರು ಲಿಂಗಪ್ಪ ಹಾಗೂ ರಂಗಕರ್ಮಿ ಪ್ರಮೋದ್ ಶಿಗ್ಗಾಂವ್ ಅವರಿಗೆ ಸಿದ್ದರಾಮಯ್ಯ ಅವರು ಡಾ.ಹಾ.ಮಾ‌.ನಾಯಕ ಪ್ರಶಸ್ತಿ ನೀಡಿ ಗೌರವಿಸಿದರು. ಮಾಜಿ ಸಚಿವ ಚಲುವರಾಯಸ್ವಾಮಿ, ಶಾಸಕ ಶ್ರೀನಿವಾಸ್, ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡ, ಮುಖಂಡರಾದ ಶಿವಣ್ಣ, ರವಿ ಗಣಿಗ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!