ಮಗುವಿಗೆ ಜನ್ಮ ನೀಡುವ ಮುನ್ನ ಕಚೇರಿಯಲ್ಲಿಯೇ ಕೆಲಸ ಮಾಡಿದ್ದ ಜೈಪುರ ಮೇಯರ್ ಸೌಮ್ಯ

Team Newsnap
1 Min Read

ತುಂಬು ಗರ್ಭಿಣಿ ಯಾಗಿದ್ದ ರಾಜಸ್ಥಾನದ ಜೈಪುರ ನಗರ ನಿಗಮ (ಗ್ರೇಟರ್) ಮೇಯರ್ ಡಾ.ಸೌಮ್ಯಾ ಗುರ್ಜರ್ ತಡರಾತ್ರಿವರೆಗೂ ಕಚೇರಿಯಲ್ಲಿ ಕೆಲಸ ಮಾಡಿ‌ ಗುರುವಾರ ಬೆಳಿಗ್ಗೆ 5.14 ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತಡರಾತ್ರಿಯವರೆಗೆ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.  ಹೆರಿಗೆ ನೋವಿನಿಂದ ಮಧ್ಯರಾತ್ರಿ 12.30 ಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ರಾಜಸ್ಥಾನದಲ್ಲಿ ಕಚೇರಿಯಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ ಮೊದಲ ಚುನಾಯಿತ ಮೇಯರ್ ಎನಿಸಿಕೊಂಡಿದ್ದಾರೆ.

ಫೆಬ್ರವರಿ 7 ರಂದು ರಾಜಸ್ಥಾನದ ರಾಜ್ಯ ಬಿಜೆಪಿ ಕಚೇರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭೇಟಿ ನೀಡಿದ ಸಂದರ್ಭದಲ್ಲಿ “ಪೂರ್ಣಾವಧಿಯ ಗರ್ಭಧಾರಣೆಯ ಸಮಯದಲ್ಲಿ ಕೆಲಸ ಮಾಡುವುದು ಅತ್ಯಾಕರ್ಷಕ ಮತ್ತು ಸವಾಲಿನ ಸಂಗತಿಯಾಗಿದೆ. ಹೊಸ ಕಾರ್ಯಗಳನ್ನು ಕೈಗೊಳ್ಳುವುದರಿಂದ ನನ್ನ ಎಲ್ಲಾ ನೋವುಗಳನ್ನು ಮರೆತುಬಿಡುತ್ತೇನೆ” ಎಂದು ಮೇಯರ್ ಸ್ಮೃತಿ ಮೇಡಂಗೆ ಹೇಳಿದ್ದರು.

Share This Article
Leave a comment