ಕೋವಿಡ್ ಆರೈಕೆಗೆ ಹೋಮಿಯೋಪತಿ ಔಷಧ ಬಳಕೆಗೆ ಸುಪ್ರೀಂ ಅಸ್ತು – ಕೇಂದ್ರ

Team Newsnap
1 Min Read
NEET-PG 2021 - Counseling for 1,456 seats only: Supreme

ಕೋವಿಡ್ -19 ಚಿಕಿತ್ಸೆಗಾಗಿ ಸಂಬಂಧಿಸಿದಂತೆ ಪ್ರಮಾಣೀಕೃತ ಆರೈಕೆಗೆ ಹೋಮಿಯೋಪತಿಯನ್ನು ಸಹ ಸೇರಿಸಲು ಸುಪ್ರೀಂ ಕೋಟ್೯ ಅನುಮತಿ ನೀಡಿದೆ.

2020 ರ ಡಿಸೆಂಬರ್ 15, 2020 ಸುಪ್ರೀಂ ನೀಡಿದ ತೀರ್ಪಿನ ಸಲಹೆಯನ್ನು
ಈಗಲೂ ಎತ್ತಿ ಹಿಡಿದಿದೆ.
ಈ ವಿಷಯವನ್ನು ಆಯುಷ್ ಸಚಿವಾಲಯದ ಹೆಚ್ಚುವರಿ ರಾಜ್ಯ ಸಚಿವ ಕಿರೆನ್ ರಿಜ್ಜು ಲೋಕಸಭೆಗೆ ಶುಕ್ರವಾರ ತಿಳಿಸಿದರು.

ಸಂಸದರಾದ ಇ.ಟಿ. ಮೊಹಮ್ಮದ್ ಬಶೀರ್ ಪ್ರಶ್ನೆಗೆ ಸಚಿವ ಕಿರೆನ್ ಸ್ಪಷ್ಟೀಕರಣವನ್ನು ನೀಡಿದರು, 2020 ಮಾರ್ಚನಲ್ಲಿ ಅಂಗೀಕರಿಸಿದ ಆದೇಶದ ಬಗ್ಗೆ ಉಲ್ಲೇಖಿಸಲಾಗಿದೆ, ಚಿಕಿತ್ಸೆಯ ಪ್ರಾಥಮಿಕ ಮಾರ್ಗವಲ್ಲದಿದ್ದರೂ, ಹೋಮಿಯೋಪತಿಯನ್ನು ಚಿಕಿತ್ಸೆಯ ರೇಖೆಯಾಗಿ COVID-19 ಚಿಕಿತ್ಸೆಗಾಗಿ ಪ್ರಮಾಣೀಕೃತ ಆರೈಕೆ ಪಟ್ಟಿಗೆ ಸೇರಿಸಲಾಗಿದೆ ಎಂದರು.‌

COVID-19 ಸಂಬಂಧಿತ ಚಿಕಿತ್ಸೆಗಾಗಿ ಹೋಮಿಯೋಪತಿಯನ್ನು ಒಳಗೊಂಡಂತೆ ಆಯುಷ್ ಔಷಧಿ ವ್ಯವಸ್ಥೆಗಳೊಂದಿಗೆ ಆಯುಷ್ ಸಚಿವಾಲಯವು ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದರು.

ಆಯುಷ್ ಸಚಿವಾಲಯವು ಹಲವಾರು ಸಂಶೋಧನಾ ಸಂಸ್ಥೆಗಳು ಮತ್ತು ರಾಷ್ಟ್ರೀಯ ಸಂಸ್ಥೆಗಳ ನೆರವಿನ ಮೂಲಕ ದೇಶದ 136 ಕೇಂದ್ರಗಳಲ್ಲಿ 105 ಅಂತರಶಿಕ್ಷಣ ಕ್ಲಿನಿಕಲ್ ಅಧ್ಯಯನಗಳನ್ನು ನಡೆಸಿದೆ ಎಂದು ಹೇಳಿದರು.

Share This Article
Leave a comment