ವಿವಾದಿತ ಗಡಿ: ಭಾರತ-ಚೀನಾ ಸೇನಾ ಹಿಂತೆಗೆತಕ್ಕೆ ನಿರ್ಧಾರ- ಚೀನಾಗೆ ಒಂದಿಂಚೂ ನೆಲ ಬಿಟ್ಟಿಲ್ಲ – ರಾಜನಾಥ್

Team Newsnap
1 Min Read

ಲಡಾಖ್​ನ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳಿಂದ ಭಾರತ ಮತ್ತು ಚೀನಾದ ಸೇನೆಗಳು ವಾಪಸ್ ಹೋಗುವ ಕೆಲಸ ಆರಂಭವಾಗಿದೆ ಎಂದು ಗುರುವಾರ ರಕ್ಷಣಾ ಸಚಿವ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಪ್ರಕಟಿಸಿದರು.

ಚೀನಾ ಮತ್ತು ಭಾರತ ಸೇನಾ ಹಿಂತೆಗೆತ ನಿರ್ಧಾರ ಬಹಳ ಕಣ್ಗಾವಲಿನಲ್ಲಿ ಹಂತ ಹಂತವಾಗಿ ಎಚ್ಚರಿಕೆಯಿಂದ ಈ ಪ್ರಕ್ರಿಯೆ ನಡೆಯಲಿದೆ. ಲಡಾಖ್ ಗಡಿಭಾಗದಲ್ಲಿ ಬಿಕ್ಕಟ್ಟು ಶಮನಗೊಳಿಸಲು ಭಾರತ ನಡೆಸಿದ ಅವಿರತ ಮಾತುಕತೆ ಪ್ರಯತ್ನ ಫಲಕೊಡುತ್ತಿದೆ ಎಂದರು.

ಪಾಂಗಾಂಗ್ ನಾರ್ತ್ ಬ್ಯಾಂಕ್​ನಲ್ಲಿ ಸೇರಿರುವ ಉಭಯ ಸೇನಾಪಡೆಗಳನ್ನು ಮೊದಲು ಹಿಂದಕ್ಕೆ ಕರೆಸಲಾಗುತ್ತದೆ. ನಂತರ ದಕ್ಷಿಣ ದಂಡೆಯಿಂದ ತೆರವು ಕಾರ್ಯವಾಗಲಿದೆ. ಸರೋವರದ ದಕ್ಷಿಣ ದಂಡೆಯಿಂದ ಯುದ್ಧದ ಟ್ಯಾಂಕ್​ಗಳನ್ನ ವಾಪಸ್ ಕಳುಹಿಸಲಾಗುತ್ತಿದೆ. ಅಲ್ಲಿರುವ ಭಾರತೀಯ ತುಕಡಿಗಳ ಪ್ರಮಾಣವನ್ನೂ ತಗ್ಗಿಸಲಾಗುತ್ತಿದೆ ಎಂದು ಹೇಳಲಾಗಿದೆ.

ವಾಸ್ತವ ಗಡಿ ರೇಖೆ ಗಡಿಭಾಗದಲ್ಲಿ ಶಾಂತಿ ಪಾಲನೆ ಮಾಡುವುದು ನಮ್ಮ ಉದ್ದೇಶ. ಕಳೆದ ವರ್ಷ ಚೀನಾದ ನಡೆಯಿಂದಾಗಿ ಈ ಗಡಿಭಾಗದಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿತ್ತು. ಗಡಿಭಾಗದಲ್ಲಿ ಸೇನಾ ಹಿಂತೆಗೆತ ಎಷ್ಟು ಮುಖ್ಯ ಎಂಬುದನ್ನು ನಾವು ಮನದಟ್ಟು ಮಾಡಿಕೊಟ್ಟಿದ್ದೇವೆ. ಅಲ್ಲದೇ ಗಡಿಯಲ್ಲಿ ಭಾರತ ಅಗತ್ಯಕ್ಕೆ ತಕ್ಕಂತೆ ಸೇನಾ ನಿಯೋಜನೆಗೂ ಸಿದ್ಧವಿದೆ” ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ಧಾರೆ.

1962ರ ಯುದ್ಧದಲ್ಲಿ ಚೀನಾ 38,000 ಚ.ಕೀ. ಪ್ರದೇಶವನ್ನು ಆಕ್ರಮಿಸಿ ಕೊಂಡಿತು. ಲಡಾಖ್​ನಲ್ಲಿ ಪಾಕಿಸ್ತಾನವು 5,180 ಚ.ಕೀ. ಪ್ರದೇಶವನ್ನು ಚೀನಾಗೆ ಅಕ್ರಮವಾಗಿ ನೀಡಿದೆ. ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತಕ್ಕೆ ಸೇರಿದ 90,000 ಚ.ಕೀ. ಪ್ರದೇಶವನ್ನು ಚೀನಾ ತನ್ನದೆಂದು ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಈ ಅನ್ಯಾಯವನ್ನು ನಾವು ಒಪ್ಪಿಲ್ಲ. ಎರಡೂ ದೇಶಗಳಿಂದ ಪ್ರಾಮಾಣಿಕ ಪ್ರಯತ್ನ ಆಗದ ಹೊರತು ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಸಾಧ್ಯವಿಲ್ಲ ಎಂದು ನಾನು ಹೇಳುತ್ತಲೇ ಇದ್ದೇವೆ. ಚೀನಾದೊಂದಿಗಿನ ಮಾತುಕತೆ ವೇಳೆ ನಾವು ಒಂದಿಂಚೂ ನೆಲವನ್ನೂ ಬಿಟ್ಟುಕೊಟ್ಟಿಲ್ಲ ಎಂಬ ವಿಚಾರ ಇಲ್ಲಿ ತಿಳಿಸಬಯಸುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದರು.

Share This Article
Leave a comment