January 3, 2025

Newsnap Kannada

The World at your finger tips!

chamundi temple

ದೇವರ ಜಾತ್ರೆ, ರಥೋತ್ಸವ, ದಾಸೋಹ ನಡೆಸಲು ಸರ್ಕಾರದ ಗ್ರೀನ್ ಸಿಗ್ನಲ್

Spread the love

ಕೋವಿಡ್ ಕಾರಣಕ್ಕಾಗಿ ರಾಜ್ಯದ ವಿವಿಧ ದೇವಾಲಯಗಳು ಹಾಗೂ ಜಾತ್ರಾ ಮಹೋತ್ಸವಗಳಿಗೆ ಕಡಿವಾಣ ಹಾಕಿದ್ದ ಷರತ್ತು ಹಾಗೂ ನಿಯಮಗಳನ್ನು ತೆರವುಗೊಳಿಸಲಾಗಿದೆ.

ಈ ಕುರಿತಂತೆ ಧಾರ್ಮಿಕ ದತ್ತಿ ಇಲಾಖೆ ಅಯುಕ್ತ ಅದೇಶ ಹೊರಡಿಸಿ, ಫೆಬ್ರವರಿ ತಿಂಗಳಲ್ಲಿ ರಾಜ್ಯದಲ್ಲೆಡೆ ಧಾರ್ಮಿಕ ಜಾತ್ರಾ ಮಹೋತ್ಸವಗಳು ನಡೆಯಲಿವೆ. ಸಾವಿರಾರು ಭಕ್ತಸಮೂಹ ಮತ್ತು ದೇವಾಲಯದ ಸಮಿತಿಗಳ ಧಾರ್ಮಿಕ ಭಾವನೆಗಳಿಗೆ ಗೌರವಿಸಿ, ಈ ತಿಂಗಳ ನಡೆಯುವ ಜಾತ್ರಾ ಮಹೋತ್ಸವ, ದಾಸೋಹ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ.

ಕೋವಿಡ್ ಕಾರಣದಿಂದ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ, ಉತ್ಸವ, ಪ್ರಸಾದ ವಿತರಣೆ, ದಾಸೋಹ, ತೀರ್ಥ ವಿತರಣೆ ಮತ್ತು ದೇವರ ದರ್ಶನ, ಹಾಗೂ ಬ್ರಹ್ಮರಥೋತ್ಸವ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿತ್ತು.

ಆದರೆ ಭಕ್ತರಿಂದ ದೇವಾಲಯಗಳಿಂದ ಮನವಿ ಬಂದ ಹಿನ್ನೆಲೆ ಸೆಪ್ಟೆಂಬರ್ 1ರಂದು ಕೆಲವು ನಿಯಮಗಳಲ್ಲಿ ಸಡಿಲಗೂಳಿಸಲಾಗಿತ್ತು.

ಫೆಬ್ರವರಿ ತಿಂಗಳು ಅನೇಕ ಜಾತ್ರೆ, ಮಹೋತ್ಸವ, ಉತ್ಸವ ನಡೆಯಲಿವೆ. ಭಕ್ತರ ಭಾವನೆಗಳಿಗೆ ಮನ್ನಣೆ ನಿಡುವ ದೃಷ್ಟಿಯಿಂದ ಈ ಹಿಂದೆ ನಿಷೇಧ ಹೇರಿದ್ದ ಎಲ್ಲಾ ನಿಯಮಗಳನ್ನು ತೆರವು ಮಾಡಿ ಅದೇಶ ಹೊರಡಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!