February 22, 2026

Newsnap Kannada

The World at your finger tips!

ramnagar 1

ರಾಮನಗರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೂರ್ಯಪ್ರಕಾಶ್ ಆಯ್ಕೆ

Spread the love

ರಾಮನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ (ಉದಯವಾಣಿ) ಸೂರ್ಯಪ್ರಕಾಶ್ ಆಯ್ಕೆಯಾಗಿದ್ದಾರೆ.

ರಾಮನಗರದಲ್ಲಿ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವ‌ಸಮ್ಮತವಾಗಿ ಆಯ್ಕೆ ಮಾಡಲಾಯಿತು.

ಎರಡು ವರ್ಷಗಳ ಸಂಘದ ಆಗುಹೋಗುಗಳ ಬಗ್ಗೆ ಸುದೀರ್ಘವಾದ ಚರ್ಚೆ ಮಾಡಿದ ಸಭೆಯಲ್ಲಿ ತಾಲ್ಲೂಕು ಸಂಚಾಲನಾ ಸಮಿತಿ ಸೇರಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾಗಿ ಚಲುವರಾಜು ಆಯ್ಕೆಯಾದರು.

ಕೆಯುಡಬ್ಲ್ಯೂಜೆ ಉಪಾಧ್ಯಕ್ಷ ಮತ್ತಿಕೆರೆ ಜಯರಾಂ, ರಾಮನಗರ ಸಂಚಾಲನ ಸಮಿತಿ ಸಂಚಾಲಕರಾದ ಸು.ತ.ರಾಮೇಗೌಡ ಅವರು ಹಾಜರಿದ್ದರು.

ravi bojegowda 5
error: Content is protected !!