ಮಾಚ್೯ 12 ರಂದು ಮೈಸೂರಿನ ರಂಗಾಯಣದಲ್ಲಿ ” ಪರ್ವ” ಕಾದಂಬರಿ ನಾಟಕ ರೂಪಕ್ಕೆ

Team Newsnap
1 Min Read

ಸರಸ್ವತಿ ಸಮ್ಮಾನ್‌ ಖ್ಯಾತಿಯ ಎಸ್‌.ಎಲ್‌.ಭೈರಪ್ಪನವರ ‘ಪರ್ವ’ ಕಾದಂಬರಿ ಈಗ ನಾಟಕ ರೂಪದಲ್ಲಿ ಮಾಚ್೯ 12 ರಂದು ಪ್ರದರ್ಶನಕ್ಕೆ ಸಿದ್ದವಾಗುತ್ತದೆ.

ಮೈಸೂರಿನ ರಂಗಾಯಣ ಸಂಸ್ಥೆಯು, ‘ಪರ್ವ’ ಕಾದಂಬರಿಯನ್ನು ನಾಟಕ ರೂಪಕ್ಕೆ ಪ್ರಸ್ತುತ ಪಡಿಸುತ್ತಿದ್ದಾರೆ.
ಮಾರ್ಚ್‌ 12 ರಂದು ಮೈಸೂರಿನ ಕಲಾಮಂದಿರದಲ್ಲಿ ಪರ್ವ ನಾಟಕದ ಮೊದಲ ಪ್ರದರ್ಶನ ನಡೆಯಲಿದೆ.

parva

‘ಪರ್ವ’ ಕಾದಂಬರಿಯೂ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಈ ಕಾದಂಬರಿಯನ್ನು ನಾಟಕ ರೂಪಕಕ್ಕೆ ಇಳಿಸುವ ಮೂಲಕ ರಂಗಾಯಣ ಸಂಸ್ಥೆ ಸಾಹಿತಿ ಎಲ್​ ಎಲ್​ ಭೈರಪ್ಪಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ ನಾಟಕ ಪ್ರದರ್ಶನಕ್ಕೆ ರಂಗಾಯಣದಲ್ಲಿ ಸಕಲ ಸಿದ್ದತೆ ನಡೆದಿದೆ.

‘ಪರ್ವ’ ನಾಟಕದ ತಾಲೀಮು ಸಹ ಆರಂಭವಾಗಿದೆ. ಮಾರ್ಚ್‌12ರಿಂದ  ನಾಟಕದ ಪ್ರದರ್ಶನ ಆರಂಭವಾಗಲಿದೆ. ಫೆ.21 ರಂದು ‘ವಿರಾಟ್‌ ಪರ್ವ’ ಹೆಸರಿನಲ್ಲಿ ವಿಚಾರ ಸಂಕಿರಣ ನಡೆಸುವ ಮೂಲಕ ಎಸ್.ಎಲ್‌.ಭೈರಪ್ಪರನ್ನು ಈ ನಾಟಕದ ಭಾಗವಾಗಿಸುವ ಪ್ರಯತ್ನ ವನ್ನು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಡುತ್ತಿದ್ದಾರೆ.

ರಂಗಾಯಣದ ಭೂಮಿಗೀತದಲ್ಲಿ ಈ
ನಾಟಕದ ತಾಲೀಮು ವೀಕ್ಷಿಸಿದ ಸಚಿವ ಅರವಿಂದ್ ಲಿಂಬಾವಳಿ ರಂಗಾಯಣ ಆವರಣದಲ್ಲಿ ಕುಳಿತು ‘ಪರ್ವ’ ನಾಟಕ‌ ಕುರಿತು ಮಾಹಿತಿ ಪಡೆದರು.

ನಂತರ ಮಾತನಾಡಿದ ಸಚಿವರು. ಕೊರೋನಾ ಬಳಿಕ ಮೊದಲ ನಾಟಕ ಪರ್ವ ನಾಟಕ ಪ್ರದರ್ಶನಕ್ಕೆ 50 ಲಕ್ಷ ಬಿಡುಗಡೆಗೆ ಅನುಮೋದನೆ ನೀಡಿದೆ. ಶೀಘ್ರದಲ್ಲೇ ರಂಗಾಯಣಕ್ಕೆ ಅನುದಾನ ಬಂದು ಸೇರಲಿದೆ‌ ಎಂದರು

Share This Article
Leave a comment